Dailyhunt Logo
  • Light mode
    Follow system
    Dark mode
    • Play Story
    • App Story
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿಭಾಗ: ಅರ್ಜಿಗೆ ಅ.17 ಕೊನೇ ದಿನ

ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿಭಾಗ: ಅರ್ಜಿಗೆ ಅ.17 ಕೊನೇ ದಿನ

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅ. 17ರವರೆಗೆ ಅವಕಾಶ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪ್ರಾಥಮಿಕ ಶಾಲೆಗಳ ಪ್ರತಿ ವಿಭಾಗಕ್ಕೆ 40 ಹಾಗೂ ಪ್ರೌಢಶಾಲೆಗಳ ಪ್ರತಿ ವಿಭಾಗಕ್ಕೆ 70 ವಿದ್ಯಾರ್ಥಿಗಳ ಸಂಖ್ಯಾಬಲ ನಿಗದಿಪಡಿಸಲಾಗಿದೆ.

ಶಾಲಾ ಆಡಳಿತ ಮಂಡಳಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

ಅನಧಿಕೃತ ವಿಭಾಗಗಳನ್ನು ಹೊಂದಿರುವ ಶಾಲೆಗಳು ಸಹ ಈ ಅವಧಿಯಲ್ಲಿ ಕಡ್ಡಾಯವಾಗಿ ನಿಯಮಾನುಸಾರ ಅನುಮತಿ ಪಡೆಯಬೇಕಿದ್ದು, ತಪ್ಪಿದರೆ ವಿಭಾಗಗಳನ್ನು ಮುಂದುವರಿಸಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವಾಗ 'ಸ್ಯಾಟ್ಸ್‌ ಕರ್ನಾಟಕ' ಆಯಪ್‌ ಮೂಲಕ ಶಾಲೆಯ ಮೂಲಸೌಕರ್ಯಗಳ ಜಿಯೋಟ್ಯಾಗ್‌ ಫೋಟೋ ಮತ್ತು ವೀಡಿಯೋಗಳನ್ನು ಅಪ್‌ಲೋಡ್‌ ಮಾಡುವುದು ಕಡ್ಡಾಯಗೊಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani