ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ್ (Nagarjuna) ತಮ್ಮ 100ನೇ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಕಿಂಗ್ 100ʼ (#King100) ಎಂದು ಟೈಟಲ್ ಇಡಲಾಗಿದೆ.
ʼನಿತಂ ಒರು ವಾನಾಮ್ʼ, ʼ ಮೇಡ್ ಇನ್ ಕೊರಿಯಾʼ ಸಿನಿಮಾವನ್ನು ಮಾಡಿರುವ ರಾ ಕಾರ್ತಿಕ್ (Ra Karthik) ನಾಗಾರ್ಜುನ್ ಅವರ 100ನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈ ಚಿತ್ರದ ಲೇಟೆಸ್ಟ್ ಅಪ್ಡೇಟ್ ಹೊರಬಿದ್ದಿದ್ದು, ಬಾಲಿವುಡ್ ನಟಿ ಟಬು (Tabu) ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
30 ವರ್ಷದ ಬಳಿಕ ತಬು ನಾಗಾರ್ಜುನ್ ಜತೆಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಇಬ್ಬರು 1998ರಲ್ಲಿ ತೆರೆಕಂಡ ತೆಲುಗು ಚಿತ್ರ ʼಆವಿದಾ ಮಾ ಆವಿಡಾʼದಲ್ಲಿ ಇವರಿಬ್ಬರು ಕೊನೆಯದಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು, ಅವರು 1996ರ ಬ್ಲಾಕ್ಬಸ್ಟರ್ ʼನಿನ್ನೇ ಪೆಲ್ಲಡಾಟಾʼದಲ್ಲಿ ನಟಿಸಿದ್ದರು.
ಇದೀಗ ʼಕಿಂಗ್ʼ ಅವರ 100ನೇ ಚಿತ್ರದಲ್ಲಿ ಅವರು ತಬು ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ, ʼದೃಶ್ಯಂʼ ನಟಿ ಕಿಂಗ್ ಅವರ ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ʼಮಕ್ಬೂಲ್ʼ (2003), ʼಹೈದರ್ ʼ(2014) ಮತ್ತು ʼಅಂಧಾದುನ್ʼ (2018) ಚಿತ್ರದಲ್ಲಿ ತಬು ನೆಗೆಟಿವ್ ಶೇಡ್‌ನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ತಬು ಈಗಾಗಲೇ ʼಕಿಂಗ್ʼ ಜತೆ ಶೂಟಿಂಗ್ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ನಾಗಾರ್ಜುನ್ ಅವರ 100ನೇ ಚಿತ್ರಕ್ಕೆ ʼಅಸುರುಡುʼ ಎನ್ನುವ ಟೈಟಲ್ ಇಡಲಾಗುತ್ತದೆ ಎನ್ನಲಾಗುತ್ತಿದೆ.
ಇದೊಂದು ಪ್ಯಾನ್ ರೇಂಜ್‌ನಲ್ಲಿ ಬರಲಿರುವ ದೊಡ್ಡ ಚಿತ್ರವಾಗಿರಲಿದೆ.

