ಗಂಗಾವತಿ: ಭಾರತದ ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಹಾಗೂ ಅವರ ಪತ್ನಿ ವಿಜೇತ ಪೆಂಡಾರ್ಕರ್ ಅವರು ಜು.3ರ ಶುಕ್ರವಾರ ಬೆಳಗ್ಗೆ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಗೆ ಭೇಟಿ ನೀಡಿ ಶ್ರೀ ಆಂಜನೇಯ ದರ್ಶನ ಪಡೆದರು.
ರಾಹುಲ್ ದ್ರಾವಿಡ್ ದಂಪತಿ ಬೆಟ್ಟದ 575 ಮೆಟ್ಟಿಲು ಹತ್ತಿ ಶ್ರೀಆಂಜನೇಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಾಲಯದ ಕಮಿಟಿ ವತಿಯಿಂದ ಅರ್ಚಕರು ರಾಹುಲ್ ದ್ರಾವಿಡ್ ದಂಪತಿಗೆ ಸನ್ಮಾನಿಸಿ, ಶ್ರೀ ಆಂಜನೇಯನ ಭಾವಚಿತ್ರ ನೀಡಿ ಕೇಸರಿ ಶಾಲು ಹೊದಿಸಿ ದೇವಾಲಯದ ಪ್ರಸಾದ ವಿತರಿಸಿದರು.
ಈ ಸಂದರ್ಭ ಅಂಜನಾದ್ರಿ ಬೆಟ್ಟದಿಂದ ಹಂಪಿ ಹಾಗೂ ಸುತ್ತಲ 7 ಬೆಟ್ಟದ ಸೌಂದರ್ಯದ ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡರು.

