ಮಣಿಪಾಲ: ಕೋಸ್ಟಲ್‌ವುಡ್‌ನ ಯುವಪ್ರತಿಭೆ ನಟ ವಿನೀತ್ ಕುಮಾರ್ (Vineeth Kumar) ಅಭಿನಯನದ '90 ಎಂ.ಎಲ್' (90 ML Movie) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ತನ್ನ ಟೈಟಲ್‌ನಿಂದಲೇ ತುಳುನಾಡಿನೆಲ್ಲೆಡೆ ಸದ್ದು ಮಾಡುತ್ತಿರುವ ʼ90 ಎಂ.ಎಲ್ʼ ಇತ್ತೀಚೆಗೆ ʼಶನಿವಾರ ಬಯ್ಯಗೊರ ಬಾರ್ ದಂಚಿ ತಿಕ್ಕುಗʼ ಹಾಡು ರಿಲೀಸ್ ಮಾಡಿ ಗಮನ ಸೆಳೆದಿತ್ತು.
ಟಪ್ಪಾಂಗುಚ್ಚಿ ಹಾಡಿನಂತೆ ಕೋಸ್ಟಲ್‌ವುಡ್‌ನಲ್ಲಿ ಈ ಹಾಡು ಟ್ರೆಂಡ್‌ನಲ್ಲಿದೆ. ಈಗ ನಿರೀಕ್ಷೆ ಹೆಚ್ಚಿಸಿರುವ ʼ90 ಎಂ.ಎಲ್ʼ ಟ್ರೇಲರ್ ರಿಲೀಸ್ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಕುಡಿಯುವುದನ್ನು ನಿಲ್ಲಿಸಬೇಕೆನ್ನುವ ಡೈಲಾಗ್‌ನೊಂದಿಗೆ ಶುರುವಾಗುವ ಟ್ರೇಲರ್ ಆ ಬಳಿಕ ನಾಯಕ ನಟನ ಜೀವನದ ಕಥೆಯ ಎಳೆಯನ್ನು ತೋರಿಸಲಾಗಿದೆ.
ಬದುಕಿನ ಕೊನೆ ಘಟ್ಟದಲ್ಲಿರುವ ವೃದ್ಧನೊಬ್ಬನ ಕೊನೆಯಾಸೆಯನ್ನು ಪೂರ್ತಿ ಮಾಡಲು ನಾಯಕ ಮತ್ತು ಮತ್ತವನ ಸ್ನೇಹಿತರು ಮುಂದಾಗುತ್ತಾರೆ. ಆ ಆಸೆ ಏನು? ಅದಕ್ಕೆ ಎದುರಾಗುವ ಸಂಕಷ್ಟ ಏನು ಎನ್ನುವುದುನ್ನು ಹಾಸ್ಯದ ಅಂಶವನ್ನು ಸೇರಿಸಿ ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ನಾಯಕನ ಪ್ರೇಮ ಕಥೆಯ ಜತೆ ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಅವರ ಕಾಮಿಡಿ ಟ್ರೇಲರ್‌ನಲ್ಲಿ ಗಮನ ಸೆಳೆದಿದೆ.
ಮಿಡಲ್ ಕ್ಲಾಸ್ ಫ್ಯಾಮಿಲಿ ಹಿಟ್ ಚಿತ್ರದ ಬಳಿಕ ವಿನೀತ್ ಕುಮಾರ್ ಅವರು 90 ಎಂಎಲ್ ಮೂಲಕ ಮತ್ತೆ ಜನರೆದುರು ಬರುತ್ತಿದ್ದಾರೆ. ಈ ಹಿಂದೆ ಗಿರ್ಗಿಟ್ ಸಿನಿಮಾದಲ್ಲಿ ಮಿಂಚಿದ್ದ ರುಹಾನಿ ಶೆಟ್ಟಿ 6-7 ವರ್ಷದ ಬಳಿಕ ಮತ್ತೆ ತುಳು ಪ್ರೇಕ್ಷಕರೆದುರು ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ರಂಜಿತ್ ಸಿ ಬಜಾಲ್ ಆಕ್ಷನ್ ಕಟ್ ಹೇಳಿರುವ '90 ಎಂ.ಎಲ್' ಚಿತ್ರವು ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಡಿಡಿ ಪ್ರೊಡಕ್ಷನ್ ನಲ್ಲಿ ಡೊಲ್ಫಿ ಡಿಸೋಜಾ ಬಂಡವಾಳ ಹೂಡಿದ್ದು, ತಿಲಕನಾಥ ಮಂಜೇಶ್ವರ್ ಅವರು ಚಿತ್ರದ ಡೈಲಾಗ್ಸ್ ಬರೆದಿದ್ದಾರೆ.
ಚಿತ್ರದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಉಮೇಶ್ ಮಿಜಾರ್, ನಮಿತಾ, ಶೈಲಶ್ರೀ ಮೂಲ್ಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Udayavani