ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಾದ ಕಾರಣ ರೈತ ಸಮೂಹ ಮಳೆಗಾಗಿ ನಾನಾ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಿದೆ. ಮಳೆಗಾಗಿ ಮೋರೆಯಿಡುತ್ತಿರುವ ರೈತರು ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಸಪ್ತ ಭಜನೆ ಕೈಗೊಂಡಿದ್ದಾರೆ.
ಬುಧವಾರದಿಂದ ಸಪ್ತ ಭಜನೆ ಆರಂಭವಾಗಿದ್ದು, ದಿನದ 24 ಗಂಟೆಗಳ ಕಾಲ ಸತತ ಏಳು ದಿನವು ನಡೆಯಲಿದೆ.
ಗ್ರಾಮದಲ್ಲಿನ ಮುದ್ದಮ್ಮ ದೇವಸ್ಥಾನದಲ್ಲಿ 12 ತಂಡದಿಂದ ಭಜನೆ ನಡೆಯಲಿದೆ. ನಿಂತುಕೊಂಡೇ ಭಜನೆ ಮಾಡುತ್ತಾ ವರುಣನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಪ್ರತಿ ಮೂರು ತಾಸಿಗೊಮ್ಮೆ ಭಜನಾ ತಂಡ ಬದಲಾಗುತ್ತಿದೆ.
ಈ ಹಿಂದೆ 2012 ರಲ್ಲಿ ಈ ಗ್ರಾಮದಲ್ಲಿ ಸಪ್ತ ಭಜನೆ ನಡೆದಿತ್ತು. ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಮತ್ತೆ ಸಪ್ತ ಭಜನೆ ಮಾಡಲಾಗುತ್ತಿದೆ. ಸಪ್ತ ಭಜನೆ ಮಾಡಿದರೆ ಖಂಡಿತ ಮಳೆಬರಲಿದೆ ಎಂಬುದು ಗ್ರಾಮಸ್ಥರ ನಂಬಿಕೆ.

