Dailyhunt
Kota: ಅಕ್ರಮವಾಗಿ ಆವಿಮಣ್ಣು ಗಣಿಗಾರಿಕೆ; ಪ್ರಕರಣ ದಾಖಲು

Kota: ಅಕ್ರಮವಾಗಿ ಆವಿಮಣ್ಣು ಗಣಿಗಾರಿಕೆ; ಪ್ರಕರಣ ದಾಖಲು

ಕೋಟ: ಬೇಳೂರು ಗ್ರಾಮದ ಗುಳ್ಳಾಡಿ ಪ್ರದೇಶದಲ್ಲಿ ಜೇಡಿಮಣ್ಣಿನ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟ ನಡೆಸಿದ ವಿರುದ್ಧ ಎ.2 ರಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಜೇಡಿಮಣ್ಣು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ರಾಜೀವ್ ಅವರ ಜಾಗದಲ್ಲಿ ಪರವಾನಿಗೆ ಇಲ್ಲದೆ ಜೇಡಿಮಣ್ಣನ್ನು ತೆಗೆಯಲಾಗುತ್ತಿತ್ತು.

ಅದನ್ನು ಎರಡು ಟಿಪ್ಪರ್ ವಾಹನಗಳ ಮೂಲಕ ಸಾಗಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ.

ದಾಳಿ ಸಂದರ್ಭ ಸುಮಾರು 3 ಟನ್ ಜೇಡಿಮಣ್ಣಿನೊಂದಿಗೆ ಎರಡು ಟಿಪ್ಪರ್ ವಾಹನಗಳನ್ನು ಹಾಗೂ ಹಿಟಾಚಿ ಯಂತ್ರ ವಶಪಡಿಸಿಕೊಂಡಿದ್ದು ಟಿಪ್ಪರ್ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani