Dailyhunt
ಕೋವಿಡ್: 14,302 ಸೋಂಕಿತರು ಗುಣಮುಖ; 3,203 ಪಾಸಿಟಿವ್ ಪ್ರಕರಣ ಪತ್ತೆ

ಕೋವಿಡ್: 14,302 ಸೋಂಕಿತರು ಗುಣಮುಖ; 3,203 ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿಂದು 3,203 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ ಮಹಾಮಾರಿಗೆ 94 ಮಂದಿ ಬಲಿಯಾಗಿದ್ದಾರೆ ಎಂದು ಇಂದು ( ಜುಲೈ 1) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 14,302 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,46,544ಕ್ಕೆ ಏರಿಕೆಯಾಗಿದೆ. ಇನ್ನು 66,505 ಸಕ್ರೀಯ ಪ್ರಕರಣಗಳಿವೆ.ರಾಜ್ಯಾದ್ಯಂತ ಇಂದು 1,56,078 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 3,203 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-4, ಬಳ್ಳಾರಿ-34, ಬೆಳಗಾವಿ-114, ಬೆಂಗಳೂರು ಗ್ರಾಮಾಂತರ-75, ಬೆಂಗಳೂರು ನಗರ-676, ಬೀದರ್-3, ಚಾಮರಾಜನಗರ-75, ಚಿಕ್ಕಬಳ್ಳಾಪುರ-40, ಚಿಕ್ಕಮಗಳೂರು-98, ಚಿತ್ರದುರ್ಗ-41, ದಕ್ಷಿಣ ಕನ್ನಡ-285, ದಾವಣಗೆರೆ-66, ಧಾರವಾಡ-27, ಗದಗ-15, ಹಾಸನ-281, ಹಾವೇರಿ-18, ಕಲಬುರಗಿ-21, ಕೊಡಗು-167, ಕೋಲಾರ-96, ಕೊಪ್ಪಳ-16, ಮಂಡ್ಯ-97, ಮೈಸೂರು-366, ರಾಯಚೂರು-6, ರಾಮನಗರ-9, ಶಿವಮೊಗ್ಗ-194, ತುಮಕೂರು-157, ಉಡುಪಿ-146, ಉತ್ತರ ಕನ್ನಡ-59, ವಿಜಯಪುರ-11, ಯಾದಗಿರಿ-6.

Dailyhunt
Disclaimer: This content has not been generated, created or edited by Dailyhunt. Publisher: Udayavani