Dailyhunt
ಕೋವಿಡ್ 19 ಕಳವಳ : ಆ.10ಕ್ಕೆ ರಷ್ಯಾ ಲಸಿಕೆ?

ಕೋವಿಡ್ 19 ಕಳವಳ : ಆ.10ಕ್ಕೆ ರಷ್ಯಾ ಲಸಿಕೆ?

ಮಾಸ್ಕೋ: ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ರಷ್ಯಾ ಆ.10ಕ್ಕೆ ಕೋವಿಡ್ 19 ಲಸಿಕೆಯ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದೆ.

ಇದು ಸಾಧ್ಯವಾದರೆ ಸರಕಾರವೊಂದು ಘೋಷಿಸಿದ ಜಗತ್ತಿನ ಮೊದಲ ಲಸಿಕೆಯಾಗಲಿದೆ.

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಈ ಲಸಿಕೆಯನ್ನು ಪಡೆಯಲಿದ್ದಾರೆ.

ಮಾಸ್ಕೋದ ಗಮಾಲೆಯ ಇನ್‌ಸ್ಟಿಟ್ಯೂಟ್‌ ಲಸಿಕೆ ಅಭಿವೃದ್ಧಿಪಡಿಸಿದೆ.

ಈಗಾಗಲೇ ಒಂದು ಸುತ್ತಿನ ಪ್ರಯೋಗ ಮುಗಿದು ಉತ್ತಮ ಫ‌ಲಿತಾಂಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2ನೇ ಸುತ್ತು ಶೀಘ್ರ ಆರಂಭವಾಗಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani