Wednesday, 28 Apr, 8.11 pm ಉದಯವಾಣಿ

ರಾಜ್ಯ
ಕೋವಿಡ್ ಆಸ್ಪತ್ರೆ ಹೊರಗೆ ಅಪರಿಚಿತ ವ್ಯಕ್ತಿ: ಜನರಲ್ಲಿ ಆತಂಕ

ಬೆಳಗಾವಿ: ಕೋವಿಡ್ ಸೋಂಕಿತ ಎಂದು ಹೇಳಲಾದ ಅಪರಿಚಿತ ವ್ಯಕ್ತಿಯೋರ್ವ ಬುಧವಾರ ಮಧ್ಯಾಹ್ನ ಇಲ್ಲಿಯ ಬಿಮ್ಸ್ ಆಸ್ಪತ್ರೆಯ ಹೊರಭಾಗದ ಫುಟ್‌ಪಾತ್ ಮೇಲೆ ಕುಳಿತುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬಿಮ್ಸ್ ನ ಕೋವಿಡ್ ವಾರ್ಡಿನಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಈಗ ಹೊರಗೆ ಬಂದು ಕುಳಿತುಕೊಂಡಿದ್ದಾನೆ ಎನ್ನಲಾಗುತ್ತಿದೆ. ಅಪರಿಚಿತ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಇದೆಯೋ ಅಥವಾ ನೆಗೆಟಿವ್ ಇದೆಯೋ ಎಂಬುದು ಗೊತ್ತಿಲ್ಲ. ಆದರೆ ಸೋಂಕಿತ ವ್ಯಕ್ತಿ ಎಂದುಕೊಂಡು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಕೆಲ ಹೊತ್ತು ಆಸ್ಪತ್ರೆಯ ಹೊರ ಭಾಗದಲ್ಲಿಯೇ ಈ ವ್ಯಕ್ತಿ ಕುಳಿತುಕೊಂಡಿರುವುದು ಕಂಡು ಬಂದಿದೆ. ಈ ವ್ಯಕ್ತಿಯನ್ನು ಕಂಡು ಜನರು ಭೀತಿಗೆ ಒಳಗಾದರು. ಸಾರ್ವಜನಿಕರು ದೂರ ನಿಂತು ನೋಡುತ್ತಿರುವುದು ಕಂಡು ಬಂತು.

ಈ ಬಗ್ಗೆ ಮಾಹಿತಿ ನೀಡಿದ ನೋಡಲ್ ಅಧಿಕಾರಿ ಡಾ. ದಂಡಗಿ ಅವರು, ಇಂತ ಪ್ರಕರಣ ಕಂಡು ಬಂದಿಲ್ಲ. ಕೋವಿಡ್ ವಾರ್ಡಿನಿಂದ ಯಾರನ್ನೂ ಹೊರಗೆ ಬಿಟ್ಟಿಲ್ಲ. ಪಾಸಿಟಿವ್ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕವೇ ಇಲ್ಲಿಂದ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top