Dailyhunt
ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ನವದೆಹಲಿ/ಹೈದರಾಬಾದ್: ಕೋವಿಡ್ 19 ಸೋಂಕನ್ನು ಗುಣಪಡಿಸಬಲ್ಲ ಲಸಿಕೆಯನ್ನು ತಯಾರಿಸುತ್ತಿರುವ ಮೂರು ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ನವೆಂಬರ್ 28, 2020) ಭೇಟಿ ನೀಡಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದರು.

ಆರಂಭಿಕವಾಗಿ ಪ್ರಧಾನಿ ಮೋದಿ ಬೆಳಗ್ಗೆ ಅಹಮದಾಬಾದ್ ನ ಜೈಡಸ್ ಕಂಪನಿಗೆ, ನಂತರ ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಗೆ ಭೇಟಿ ನೀಡಿದ್ದರು. ಅಹಮದಾಬಾದ್ ನ ಜೈಡಸ್ ಕಂಪನಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಲಸಿಕೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.

ಅಹಮದಾಬಾದ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಚಾಂಗೋದಾರ್ ಕೈಗಾರಿಕಾ ಪ್ರದೇಶದಲ್ಲಿನ ಜೈಡಸ್ ಕ್ಯಾಡಿಲಾ ಸಂಶೋಧನಾ ಕೇಂದ್ರಕ್ಕೆ ಪ್ರಧಾನಿ ಪಿಪಿಇ ಕಿಟ್ ಧರಿಸಿ ಭೇಟಿ ನೀಡಿದ್ದರು. ಈ ಮೂಲಕ ಮೊದಲ ಹಂತದ ಲಸಿಕೆ ತಯಾರಿಕೆ ಪ್ರಕ್ರಿಯೆಯ ಮಾಹಿತಿ ಪಡೆದಲ್ಲಿ ಜನರಿಗೆ ಲಸಿಕೆ ನೀಡಲು ಎದುರಿಸಬಹುದಾದ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಸಚಿವಾಲಯ ಭೇಟಿಗೂ ಮುನ್ನ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿತ್ತು.

ಕೋವಿಡ್ 19 ಸೋಂಕಿನ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಜೈಡಸ್ ಘೋಷಿಸಿದೆ.

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಹೈದರಾಬಾದ್ ನ ಭಾರತ್ ಬಯೋಟೆಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೋವಿಡ್ 19 ದೇಶಿ ಲಸಿಕೆ ಕುರಿತು ಮಾಹಿತಿ ಪಡೆದರು. ಅಲ್ಲದೇ ಈವರೆಗೆ ನಡೆದ ಬೆಳವಣಿಗೆ ಕುರಿತಂತೆ ವಿಜ್ಞಾನಿಗಳನ್ನು ಅಭಿನಂದಿಸಿದರು. ಐಸಿಎಂಆರ್ ಜತೆ ಕೈಜೋಡಿಸುವ ಮೂಲಕ ಲಸಿಕೆ ಶೀಘ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani