ಹೊಸದಿಲ್ಲಿ : ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಗುರುವಾರ ಮೊದಲ ಸುತ್ತಿನ ಕೋವಿಡ್-19 ಲಸಿಕೆ ಹಾಕಿಸಿ ಕೊಂಡರು.
“ಇಂದು ಮೊದಲ ಸುತ್ತಿನ ವ್ಯಾಕ್ಸಿನ್ ಪಡೆದೆ. ಲಸಿಕೆ ಪಡೆಯಲು ಅರ್ಹರಾದವರೆಲ್ಲ ಇದನ್ನು ತೆಗೆದುಕೊಳ್ಳಿ. ನಾವು ಎಷ್ಟು ಬೇಗ ಇದನ್ನು ತೆಗೆದು ಕೊಳ್ಳುತ್ತೇವೋ ಅಷ್ಟು ಬೇಗ ಈ ರೋಗವನ್ನು ಹೊಡೆದೋಡಿಸಬಹುದು’ ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ. ಜತೆಗೆ ಲಸಿಕೆ ಪಡೆಯುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
ಇಂಗ್ಲೆಂಡಿಗೆ ತೆರಳುವುದರೊಳಗಾಗಿ ಭಾರತ ತಂಡದ ಆಟಗಾರರೆಲ್ಲರೂ ಮೊದಲ ಸುತ್ತಿನ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕು ಎಂದು ಬಿಸಿಸಿಐ ಸೂಚಿಸಿದೆ. ಎರಡನೇ ಸುತ್ತಿನ ಲಸಿಕೆಯನ್ನು ಇಂಗ್ಲೆಂಡ್‌ನಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್‌ಡೇಟ್ಸ್ ಓದಿ

