Dailyhunt Logo
  • Light mode
    Follow system
    Dark mode
    • Play Story
    • App Story
ಕುಮಾರ ಪರ್ವತ ಟ್ರೆಕ್ಕಿಂಗ್‌ಗೆ ಗೈಡ್‌ಗಳ ನೇಮಕ: ಅರ್ಜಿ ಆಹ್ವಾನ

ಕುಮಾರ ಪರ್ವತ ಟ್ರೆಕ್ಕಿಂಗ್‌ಗೆ ಗೈಡ್‌ಗಳ ನೇಮಕ: ಅರ್ಜಿ ಆಹ್ವಾನ

ಸುಳ್ಯ: ಪುಷ್ಪಗಿರಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮಾರ ಪರ್ವತ ಟ್ರೆಕ್ಕಿಂಗ್‌ಗೆ ಆಗಮಿಸುವ ಪ್ರವಾಸಿಗರಿಗಾಗಿ ಟ್ರೆಕ್ಕಿಂಗ್‌ ಗೈಡ್‌ ಗಳ ನೇಮಕಕ್ಕೆ ಆಸಕ್ತ ಅಭ್ಯರ್ಥಿ ಗಳಿಂದ ನೋಂದಣಿಗೆ ಆಹ್ವಾನಿಸಲಾಗಿದೆ.

18 ವರ್ಷ ಮೇಲ್ಪಟ್ಟ, ದೈಹಿಕವಾಗಿ ಸದೃಢರಾಗಿರುವ ಪ್ರಕೃತಿ, ಪರಿಸರ ಹಾಗೂ ಟ್ರೆಕ್ಕಿಂಗ್‌ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗಾಗಿ ವಿಶೇಷ ಟ್ರೆಕ್ಕಿಂಗ್‌ ಗೈಡ್‌ ತರಬೇತಿ ಇರುತ್ತದೆ. ಟ್ರೆಕ್ಕಿಂಗ್‌ ಮಾರ್ಗದರ್ಶನ, ಪ್ರವಾಸಿಗರ ಸುರಕ್ಷತೆ, ಪ್ರಥಮ ಚಿಕಿತ್ಸೆ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ, ಪರಿಸರ ಜಾಗೃತಿ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಕುರಿತಂತೆ ಸಮಗ್ರ ತರಬೇತಿ ನೀಡಲಾಗುವುದು.

ತರಬೇತಿ ಪೂರ್ಣಗೊಳಿಸಿದವರಿಗೆ ಅಧಿಕೃತ ಪ್ರಮಾಣಪತ್ರವೂ ವಿತರಿಸಲಾಗುತ್ತದೆ. ಆಸಕ್ತರು 9380098454ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani