Dailyhunt Logo
  • Light mode
    Follow system
    Dark mode
    • Play Story
    • App Story
Kumble: ಎಂಡಿಎಂಎ ಸಾಗಿಸುತ್ತಿದ್ದವನ ಬಂಧನ

Kumble: ಎಂಡಿಎಂಎ ಸಾಗಿಸುತ್ತಿದ್ದವನ ಬಂಧನ

ಕುಂಬಳೆ: ನಾರಾಯಣ ಮಂಗಲ ಎಂಬಲ್ಲಿ ಮೊಬೈಲ್ ಕವರ್ ನಲ್ಲಿ ಮಾದಕ ವಸ್ತು ಎಂಡಿಎಂಎ ಅಡಗಿಸಿಟ್ಟು ಓಡಾಡುತ್ತಿದ್ದ ಕೊಯಿಪಾಡಿ ನಿವಾಸಿ ಕೆ.ಬಿನೇಶ್ (29) ಎಂಬವನನ್ನು ರವಿವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ತಡ ರಾತ್ರಿ ಸುಮಾರು 1 ಗಂಟೆಗೆ ಕೊಯಿಪ್ಪಾಡಿ ನಾರಾಯಣಮಂಗಲಂ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೋಟಾರ್ ಸೈಕಲ್‌ನಲ್ಲಿ ಕುಳಿತಿದ್ದ ಬಿನೀಶ್ ಕೆ.

ಬಳಿ ಕುಂಬಳೆ ಪೊಲೀಸರು ಬಂದಾಗ ಪೊಲೀಸರನ್ನು ಕಂಡು ಬೈಕ್ ನಲ್ಲಿ ಪರಾರಿಯಾಗಲು ಪ್ರಯತ್ನಿಸಿದಾಗ ತಡೆದು ಪರಿಶೀಲನೆ ನಡೆಸಿದಾಗ ಆತನ ಮೊಬೈಲ್ ಕವರ್ ನಲ್ಲಿ ಎಂಡಿಎಂಎ ಪೊಲೀಸರಿಗೆ ದೊರೆಯಿತು. ಎಂಡಿಎಂಎ, ಬೈಕ್ ಮತ್ತು ಫೋನ್ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani