ಕುಂಬಳೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಫ್ ಟೀಂ ಹಾಗೂ ಕುಂಬಳೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 31 ಕಿಲೋ ಗಾಂಜಾ ಸಹಿತ ಅಂತಾರಾಜ್ಯ ಆರೋಪಿ ಲಾಲಾ ಕಬೀರ್ ಹಾಗೂ ಆತನ ಸಹಚರ ಮುಹಮ್ಮದ್ ನಿಹಾಲ್‌ನನ್ನು ಬಂಧಿಸಿದ್ದಾರೆ.
ಇವರು ಸಂಚರಿಸುತ್ತಿದ್ದ ಕಾರನ್ನು ವಶಪಡಿಸಲಾಗಿದೆ.
ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಗಾಂಜಾವನ್ನು ಒಡಿಸ್ಸಾದಿಂದ ತರಲಾಗಿದೆ ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಳವು, ಅಪಹರಣ, ಸಹಿತ ಹಲವು ಪ್ರಕರಣಗಳಲ್ಲಿ ಲಾಲಾ ಕಬೀರ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕೇರಳ ಹಾಗೂ ಕರ್ನಾಟಕದಲ್ಲಾಗಿ ಈತನ ವಿರುದ್ಧ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ಜೈಲಿನಲ್ಲಿದ್ದ ಲಾಲಾ ಕಬೀರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದನು.

