Dailyhunt
Kundapura: ಬಾಲಕ ಆತ್ಮಹತ್ಯೆ

Kundapura: ಬಾಲಕ ಆತ್ಮಹತ್ಯೆ

ಕುಂದಾಪುರ: ಪ್ರೌಢ ಶಾಲೆ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ಕುಂದಾಪುರದ ಮಂಗಲ್ ಪಾಂಡೆ ಎಂಬಲ್ಲಿ ಸಂಭವಿಸಿದೆ.

ಇಲ್ಲಿನ ಪುರಸಭೆ ವ್ಯಾಪ್ತಿಯ ಮಂಗಲ್ ಪಾಂಡೆ ರಸ್ತೆಯ ನಿವಾಸಿ ಚಂದ್ರಶೇಖರ ಬಾಯರಿ ಅವರ ಪುತ್ರ ಕೌಶಿಕ್ ಬಾಯರಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಈತ ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗುರುವಾರ ಎಸೆಸೆಲ್ಸಿ ಪರೀಕ್ಷೆ ಇದ್ದುದರಿಂದ 8-9ನೇ ತರಗತಿಯವರಿಗೆ ರಜೆ ನೀಡಲಾಗಿತ್ತು. 9ನೇ ತರಗತಿಯರಿಗೂ ಪರೀಕ್ಷೆ ನಡೆಯುತ್ತಿದ್ದು, ಈವರೆಗೆ 4 ಪರೀಕ್ಷೆ ಮುಗಿದಿದೆ; ಇನ್ನು ಎರಡು ಪರೀಕ್ಷೆ ಬಾಕಿಯಿದ್ದು, ಎ. 4 ಹಾಗೂ ಎ. 6ರಂದು ನಿಗದಿಯಾಗಿದೆ.‌ ಈತ ನಾಲ್ಕು ವಿಷಯಗಳ ಪರೀಕ್ಷೆ ಬರೆದಿದ್ದು, ಕಲಿಕೆಯಲ್ಲೂ ಮುಂಚೂಣಿಯಲ್ಲಿದ್ದ ಎನ್ನುವುದಾಗಿ ಆತನ ಶಿಕ್ಷಕರೊಬ್ಬರು ಹೇಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Udayavani