Dailyhunt
Kundapura: ಕಾರಿಗೆ ಲಾರಿ ಢಿಕ್ಕಿ ; ಪ್ರಯಾಣಿಕರು ಪಾರು

Kundapura: ಕಾರಿಗೆ ಲಾರಿ ಢಿಕ್ಕಿ ; ಪ್ರಯಾಣಿಕರು ಪಾರು

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಹಂಗಳೂರು ಸಮೀಪ ಎ.3ರಂದು ಕಾರಿಗೆ ಹಿಂದಿನಿಂದ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಲಾರಿಯೊಂದು ಢಿಕ್ಕಿಯಾಗಿ, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಲ್ಲೂರಿಗೆ ಬಂದು ವಾಪಾಸಾಗುತ್ತಿದ್ದ ಕೇರಳ ಮೂಲದ ದಂತ ವೈದ್ಯೆ ಗ್ರೀಷ್ಮಾ ಅವರ ಕುಟುಂಬ ವಾಪಾಸಾಗುತ್ತಿದ್ದ ವೇಳೆ ಹಂಗಳೂರು ಬಳಿ ಮುಂಬಯಿನಿಂದ ಪಡುಬಿದ್ರಿಗೆ ಸರಕು ಸಾಗಿಸುತ್ತಿದ್ದ ಲಾರಿ ಹಿಂದಿನಿಂದ ಢಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಜಖಂಗೊಂಡಿದೆ.

ಅಪಘಾತದಿಂದ ಕೆಲ ಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಕುಂದಾಪುರ ಸಂಚಾರ ಠಾಣಾ ಎಸ್ ಐ ಅನೂಪ್ ಕುಮಾರ್ ಹಾಗೂ ಸಿಬಂದಿ ಆಗಮಿಸಿ, ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani