Dailyhunt
Kundapura: ಕರ್ಕುಂಜೆ: ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಗೂಡ್ಸ್ ವಾಹನ ಢಿಕ್ಕಿ

Kundapura: ಕರ್ಕುಂಜೆ: ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಗೂಡ್ಸ್ ವಾಹನ ಢಿಕ್ಕಿ

ಕುಂದಾಪುರ: ಕರ್ಕುಂಜೆ ಗ್ರಾಮದ ಕುಂಟುನೇರಳಿನಲ್ಲಿನ ಮುಖ್ಯ ರಸ್ತೆ ಬದಿ ನಿಂತಿದ್ದ ಸುಧೀಕ್ಷ್ (15) ಗೆ ಗೂಡ್ಸ್ ವಾಹನ ಢಿಕ್ಕಿಯಾಗಿ, ಗಾಯಗೊಂಡಿದ್ದಾರೆ.

ಅಪಘಾತದಿಂದಾಗಿ ಸುಧೀಕ್ಷ್ ಅವರ ಮುಖ, ಕೈಕಾಲುಗಳಿಗೆ ಗಾಯಗಳಾಗಿದ್ದು, ಗೂಡ್ಸ್ ಚಾಲಕ ಗಣೇಶ್ ಅವರು ಸುಧೀಕ್ಷ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani