Dailyhunt
Lalit Modi: ಲಕ್ನೋ ತಂಡದ ಮಾಲಕ ಗೋಯೆಂಕಾಗೆ ನಿಷೇಧ ಹೇರಿ

Lalit Modi: ಲಕ್ನೋ ತಂಡದ ಮಾಲಕ ಗೋಯೆಂಕಾಗೆ ನಿಷೇಧ ಹೇರಿ

ಹೊಸದಿಲ್ಲಿ: ಐಪಿಎಲ್‌ ಪಂದ್ಯದಲ್ಲಿ ತನ್ನ ತಂಡ ಸೋತ ಬಳಿಕ ನಾಯಕರ ಜತೆಗೆ ಬಿಸಿಬಿಸಿ ಚರ್ಚೆ ನಡೆಸಿ ಸುದ್ದಿಯಾಗುತ್ತಿರುವ ಲಕ್ನೋ ಸೂಪರ್ ಜೈಂಟ್ಸ್‌ನ ಮಾಲಕ ಸಂಜೀವ್‌ ಗೋಯೆಂಕಾರನ್ನು ಐಪಿಎಲ್‌ನಿಂದ ನಿಷೇಧಿಸಿ ಎಂದು ಐಪಿಎಲ್‌ ಸಂಸ್ಥಾಪಕ, ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಲಲಿತ್‌ ಮೋದಿ, ಬಿಸಿಸಿಐಯನ್ನು ಆಗ್ರಹಿಸಿದ್ದಾರೆ.

ಡೆಲ್ಲಿ ವಿರುದ್ಧ ಲಕ್ನೋ ಸೋತ ಬಳಿಕ ಲಕ್ನೋ ನಾಯಕ ರಿಷಭ್‌ ಪಂತ್‌ ಜತೆಗೆ ಗೋಯೆಂಕಾ ಚರ್ಚಿಸಿದ್ದ ವೀಡಿಯೋ ವೈರಲ್‌ ಆಗಿತ್ತು.

ಇದರ ಬೆನ್ನಲ್ಲೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಲಲಿತ್‌, ಗೋಯೆಂಕಾ ಅವರ ವರ್ತನೆ ಮುಜುಗರ ತರಿಸುತ್ತಿದೆ ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani