Dailyhunt Logo
  • Light mode
    Follow system
    Dark mode
    • Play Story
    • App Story
Landslide: ಗುಡ್ಡ ಕುಸಿದು ಪೆಟ್ರೋಲ್ ಬಂಕ್‌ಗೆ ನುಗ್ಗಿದ ಭಾರಿ ಪ್ರಮಾಣದ ಕಲ್ಲು ಮಣ್ಣು...

Landslide: ಗುಡ್ಡ ಕುಸಿದು ಪೆಟ್ರೋಲ್ ಬಂಕ್‌ಗೆ ನುಗ್ಗಿದ ಭಾರಿ ಪ್ರಮಾಣದ ಕಲ್ಲು ಮಣ್ಣು...

ಗುವಾಹಾಟಿ: ಅಸ್ಸಾಂ ಮತ್ತು ಮೇಘಾಲಯ ಗಡಿ ಭಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇಲ್ಲಿನ ಜೋರಾಬಾಟ್‌ನ 'ಟೆನ್ ಮೈಲ್' ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ವೊಂದರ ಹಿಂಭಾಗದಲ್ಲಿದ್ದ ಗುಡ್ಡದ ದೊಡ್ಡ ಭಾಗ ಕುಸಿದು, ಮಣ್ಣು, ಕಲ್ಲು ಹಾಗೂ ಅವಶೇಷಗಳು ಪೆಟ್ರೋಲ್ ಬಂಕ್‌ ಆವರಣಕ್ಕೆ ನುಗ್ಗಿವೆ.

ಗುಡ್ಡದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಕುಸಿದು ಬಂದ ಪರಿಣಾಮ ಪೆಟ್ರೋಲ್ ಬಂಕ್‌ನ ಸುಮಾರು ಅರ್ಧ ಭಾಗ ಅವಶೇಷಗಳಿಂದ ಮುಚ್ಚಿಹೋಗಿದೆ. ಘಟನೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೆಟ್ರೋಲ್ ಬಂಕ್‌ ಆವರಣದಲ್ಲಿ ನಿಲ್ಲಿಸಲಾಗಿದ್ದ ಕೆಲ ವಾಹನಗಳಿಗೂ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಡುವಿಲ್ಲದೆ ವಾಹನ ಸಂಚಾರವಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಘಟನೆಯಿಂದ ಉಂಟಾಗಿರುವ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಉಳಿದಿರುವ ಗುಡ್ಡದ ಭಾಗದ ಸ್ಥಿತಿಯನ್ನೂ ಪರಿಶೀಲಿಸಿ, ಮತ್ತಷ್ಟು ಮಣ್ಣು ಕುಸಿಯುವ ಅಪಾಯವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಜೋರಾಬಾಟ್ ಹೆದ್ದಾರಿ ಉದ್ದಕ್ಕೂ ಗುಡ್ಡಗಳನ್ನು ಕಡಿದು ರಸ್ತೆ ಹಾಗೂ ಕಟ್ಟಡ ನಿರ್ಮಿಸಿರುವುದರಿಂದ, ಭಾರಿ ಮಳೆಯ ಸಮಯದಲ್ಲಿ ಇಲ್ಲಿ ಭೂಕುಸಿತ ಸಾಮಾನ್ಯ ಸಮಸ್ಯೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani