ಉಪ್ಪುಂದ: ಸಂಸದ ಬಿ. ವೈ. ರಾಘವೇಂದ್ರ ಮತ್ತು ಶಾಸಕ ಗುರುರಾಜ್ ಹಾಗೂ ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿಕ ಸಂಘದನಿರಂತರ ಹೋರಾಟ ಹಾಗೂ ದೂರ ದೃಷ್ಟಿಯ ಚಿಂತನೆಯ ಫಲವಾಗಿ ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣವನ್ನು ಅಮಾದರಿಯಾಗಿ ಅಭಿವೃದ್ಧಿ ಪಡಿಸುವ ಮಾಸ್ಟರ್‌ಪ್ಲ್ರಾನ್ ಕಾರ್ಯ ಗತವಾಗಲಿದೆ ಎಂದು ಬೈಂದೂರು ಮೂಕಾಂಬಿಕಾ ರೈಲ್ವೇ ಯಾತ್ರಿಕ ಸಂಘದ ಗೌರವಾಧ್ಯಕ್ಷ ವೆಂಕಟೇಶ ಕಿಣಿ ಬೈಂದೂರು ಹೇಳಿದರು.
ಅವರು ಬೈಂದೂರು ಮೂಕಾಂಬಿಕಾ ರೈಲ್ವೇ ಯಾತ್ರಿಕ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಸುಮಾರು 100ಕೋ. ರೂ. ಅನುದಾನ ಮಂಜೂರಾತಿ ದೊರಕಿದ್ದು, ಕರಾವಳಿಯಲ್ಲಿ ಅತೀ ದೊಡ್ಡ ಮಾದರಿ ರೈಲು ನಿಲ್ದಾಣವಾಗಲಿದೆ ಎಂದರು.
ಬೈಂದೂರಿನಿಂದ ಗಂಗಾನಾಡು ಗ್ರಾಮಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ರೈಲ್ವೇ ಗೇಟ್ ನಿಂದಾಗಿ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗೆ ಸಂಸದರು ವಿಶೇಷ ಒತ್ತು ನೀಡಿರುವುದರಿಂದ ನೂತನ ಅಂಡರ್ ಪಾಸ್ ನಿರ್ಮಾಣಕ್ಕೆ ರೈಲ್ವೇ ಮಂಡಳಿ ಯಿಂದ ಒಪ್ಪಿಗೆ ದೊರಕಿದೆ ಎಂದು ಅವರು ಹೇಳಿದರು.
ಅಧ್ಯಕ್ಷ ಜಯಾನಂದ ಹೋಬಳಿ ದಾರ್, ಕಾರ್ಯದರ್ಶಿ ಪ್ರಕಾಶ ಪೂಜಾರಿ, ಸದಸ್ಯರಾದ ಸುಧಾಕರ, ವಿಜಯ್ ಉಪಸ್ಥಿತರಿದ್ದರು.

