ಬೆಟ್ಟದಪುರ: (ಪಿರಿಯಾಪಟ್ಟಣ) ಮಧ್ಯಪ್ರದೇಶದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್‌ಪೊಲೀಸ್ ಇನ್‌ಸ್ಪೆಕ್ಟರ್‌ಕೆ.ಬಿ. ರವಿ ಅವರ ಅಂತ್ಯಕ್ರಿಯೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಣಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಕರ್ತವ್ಯ ಹಿನ್ನೆಲೆಯಲ್ಲಿ ತೆರಳಿದ್ದ ವೇಳೆ ಶುಕ್ರವಾರ ನಡೆದ ಅಪಘಾತದಲ್ಲಿ ರವಿ ಮೃತಪಟ್ಟಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ಎಪಿಕೆ ಫೈಲ್ ಪ್ರಕರಣ ಸಂಬಂಧ ಪಿಐ ರವಿ, ಪಿಎಸ್‌ಐ ರಮೇಶ್, ಎಎಸ್‌ಐ ಶ್ರೀನಿವಾಸ್, ಕಾನ್‌ಸ್ಟೇಬಲ್ ವಿಶ್ವನಾಥ್ ಸೇರಿ 6 ಮಂದಿ 4 ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ತೆರಳಿದ್ದರು.
ಪಿಐ ರವಿ ಸೇರಿ ನಾಲ್ವರು ಬಸ್‌ನಲ್ಲಿ ತೆರಳುತ್ತಿದ್ದರು. ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಜ್‌ಗಡ್ ಸಮೀಪ ಮೇಲು ಸೇತುವೆಯ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ರವಿ ಸ್ಥಳದಲ್ಲೇ ಮೃತಪಟ್ಟಿದ್ದರು.

