ಬೆಂಗಳೂರು: ಮಹಾರಾಜ ಕಪ್ ಟಿ20 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯಾವಳಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 8ನೇ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 148 ರನ್ ಗಳಿಸಿ ಆಲೌಟಾಯಿತು.
ಕೆ.ಪಿ.ಕಾರ್ತಿಕೇಯ 38, ಮನೋಜ್ ಭಾಂಡಗೆ 38 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್ ಕೊಡುಗೆ ನೀಡುವಲ್ಲಿ ವಿಫಲರಾದರು. ಉಳಿದ ಯಾವುದೇ ಆಟಗಾರರ ರನ್ 20ರ ಗಡಿ ದಾಟಲಿಲ್ಲ. ಬೆಂಗಳೂರು ಪರ ನಿಶ್ಚಿತ್ 4 ವಿಕೆಟ್ ಪಡೆದು ಮಿಂಚಿದರು.
149 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ಎದುರಾದರೂ ಸುಲಭ ಜಯ ಸಾಧಿಸಿತು. ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್ 57 ರನ್ ಬಾರಿಸಿದರೆ, ಸಮಿತ್ ದ್ರಾವಿಡ್ 40 ರನ್ ಬಾರಿಸಿದರು. ಹೀಗಾಗಿ ಬೆಂಗಳೂರು ತಂಡ 14.4 ಓವರ್‌ಗಳಲ್ಲೇ ಗುರಿ ತಲುಪಿತು.
ಸಂಕ್ಷಿಪ್ತ ಸ್ಕೋರ್: ಮೈಸೂರು 19.4 ಓವರಲ್ಲಿ 148/10 (ಭಾಂಡಗೆ 38, ನಿಶ್ಚಿತ್ 34ಕ್ಕೆ 3), ಬೆಂಗಳೂರು 14.4 ಓವರಲ್ಲಿ 150/2 (ಶ್ರೀಜಿತ್ 57, ಸಮಿತ್ 40).

