Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ಗೆ ವೈಶಾಖ್‌ ನಾಯಕ

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ಗೆ ವೈಶಾಖ್‌ ನಾಯಕ

ಮೈಸೂರು : ಜೂ .20 ರಿಂದ ಜು .12 ರವರೆಗೆ ಮೈಸೂರು , ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೆಎಸ್ ‌ ಸಿಎ ಮಹಾರಾಜ ಟ್ರೋಫಿ ಟಿ 20 ಪಂದ್ಯಾವಳಿಗೆ ಸಂಬಂಧಿಸಿ ಮೈಸೂರು ವಾರಿಯರ್ಸ್ ತಂಡಕ್ಕೆ ನಾಯಕರಾಗಿ ವೇಗಿ ವೈಶಾಖ್ ವಿಜಯ್ ಕುಮಾರ್ ನಾಯಕರಾಗಿ ಆಯ್ಕೆಯಾಗಿದ್ದಾರೆ . ಮೈಸೂರಿನಲ್ಲಿ ಗುರುವಾರ ನಡೆದ ಟೂರ್ನಿಯ ಅಧಿಕೃತ ಗೀತೆ ಬಿಡುಗಡೆ ಮತ್ತು ಮೈಸೂರು ತಂಡದ ಪರಿಚಯ ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಲಾಯಿತು .

ನಗರದ ಖಾಸಗಿ ಹೋಟೆಲ್ ' ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ , ' ಮಹಾರಾಜ ಟ್ರೋಫಿ ಟೂರ್ನಿ ಪ್ರಾದೇಶಿಕ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿದೆ . 2026 ರ ಆವೃತ್ತಿ ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತು ಅಭಿಮಾನಿಗಳನ್ನು ರಂಜಿಸುವ ವಿಚಾರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ವಿಶ್ವಾಸವಿದೆ ಎಂದರು .

Dailyhunt
Disclaimer: This content has not been generated, created or edited by Dailyhunt. Publisher: Udayavani