Dailyhunt
ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ: 413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗಿದ್ದು, ಒಂದೇ ದಿನ ಬರೊಬ್ಬರಿ 413 ಮಂದಿಗೆ ಕೊರೊನಾ ಸೋಂಕು ಆವರಿಸಿದೆ.

ಮಂಡ್ಯ 169, ಮದ್ದೂರು 28, ಮಳವಳ್ಳಿ 25, ಪಾಂಡವಪುರ 62, ಶ್ರೀರಂಗಪಟ್ಟಣ 37, ಕೆ.ಆರ್.ಪೇಟೆ 35, ನಾಗಮಂಗಲ 45 ಹಾಗೂ ಹೊರ ಜಿಲ್ಲೆಯ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಇದುವರೆಗೂ ಜಿಲ್ಲೆಯಾದ್ಯಂತ 22675 ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಾದ್ಯಂತ 113 ಮಂದಿ ಸೋಂಕಿನಿoದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ 20764 ಮಂದಿ ಚೇತರಿಸಿಕೊಂಡಿದ್ದಾರೆ. 1742 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 427 ಸರ್ಕಾರಿ ಆಸ್ಪತ್ರೆ, 50 ಖಾಸಗಿ ಆಸ್ಪತ್ರೆ, 592 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ 673 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

4135 ಮಂದಿಗೆ ಮಂಗಳವಾರ ಪರೀಕ್ಷೆ ನಡೆಸಲಾಗಿದೆ.

ಅದರಲ್ಲಿ 3671 ಆರ್‌ಟಿಪಿಸಿಆರ್ ಹಾಗೂ 464 ಮಂದಿಗೆ ರ‍್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani