ಮಂಗಳೂರು: ಬಿಜೈನಲ್ಲಿ ಮನೆಯೊಂದರ ಮನೆಬಾಗಿಲು ಮುರಿದು ಕಳವು ಮಾಡಲು ಯತ್ನಿಸಿದ ಬಗ್ಗೆ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮಾಲಕಿ ಬಿಜೈ ನಿವಾಸಿ ಲಿತಿಶೀಯಾ ತೌರೋ ಅವರು ಮಾ.4ರಂದು ಬೆಂಗಳೂರಿನ ಪುತ್ರನ ಮನೆಗೆ ತೆರಳಿದ್ದರು. ಮಾ. 27ರಂದು ಸಂಜೆ ನೆರೆಮನೆಯ ಯುಲಾಲಿಯ ಡಿ'ಸೋಜಾ ಅವರು ಫೋನ್ ಮಾಡಿ ಮನೆಗೆ ಯಾರೋ ಕಳ್ಳರು ನುಗ್ಗಿದ್ದು, ಮನೆಯ ಬೀಗ ಮುರಿದು ಬಾಗಿಲು ತೆರೆದಿರುವ ಬಗ್ಗೆ ತಿಳಿಸಿದ್ದಾರೆ.
ಅದರಂತೆ ಮಾ.28ರಂದು ಲಿತಿಶೀಯಾ ಅವರು ವಾಪಾಸ್ ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳರು ಬಾಗಿಲಿನ ಲಾಕ್ ನ್ನು ಯಾವುದೋ ಬಲವಾದ ಆಯುಧವನ್ನು ಉಪಯೋಗಿಸಿ ತೆರೆದು ಮನೆಯೊಳಗಡೆ ಪ್ರವೇಶಿಸಿರುವುದು ಕಂಡು ಬಂದಿದೆ. ಬೆಡ್ ರೂಮಿನಲ್ಲಿದ್ದ ಕಪಾಟಿನ ಬೀಗವನ್ನೂ ಒಡೆದು ತೆರೆದು ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಕಳವು ಮಾಡಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

