ಮಂಗಳೂರು: ಕೆಥೋಲಿಕ್ ಕ್ರೆ„ಸ್ತರು ಮೇರಿ ಮಾತೆಯ ಜನನದ ಹಬ್ಬವನ್ನು ಮೊಂತಿ ಫೆಸ್ತ್ ಆಗಿ ಆಚರಿಸುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ನಡೆಯುವ ನೊವೆನಾ ಪ್ರಾರ್ಥನೆಗಳು ರವಿವಾರ ಆರಂಭಗೊಳ್ಳಲಿವೆ.
ರವಿವಾರ ಬೆಳಗ್ಗೆ ಬಲಿಪೂಜೆ, ನೊವೆನಾದೊಂದಿಗೆ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ್ಯ ನಡೆಯಲಿದೆ.
ಮುಂದಿನ 9 ದಿನ ನೊವೆನಾ ನಡೆಯಲಿದ್ದು, ಪ್ರತೀ ಚರ್ಚ್‌ಗಳಲ್ಲಿ ಬಲಿಪೂಜೆ ಜತೆಗೆ ನೊವೆನಾ ವಿಶೇಷ ಪ್ರಾರ್ಥನೆ ನಡೆಯಲಿದೆ. ಮಕ್ಕಳು, ಮಹಿಳೆಯರು, ಹಿರಿಯರು ಸಹಿತ ಮಾತೆಗೆ ಹೂ ಆರ್ಪಿಸಲಿದ್ದಾರೆ.
ನಿತ್ಯ ಹೂ ಆರ್ಪಿಸುವ ಮಕ್ಕಳಿಗೆ ಚರ್ಚ್ ವತಿಯಿಂದ ಸಿಹಿತಿಂಡಿ ವಿತರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಮಾತೆಯ ಗ್ರೊಟ್ಟೊ ಮುಂಭಾಗದಲ್ಲಿ ನೊವೆನಾ ನಡೆದರೆ, ಇನ್ನು ಕೆಲವರು ತಮ¬¾ ಮನೆಗಳಲ್ಲೇ ಮಾತೆಗೆ ಹೂ ಆರ್ಪಿಸುವ ಮೂಲಕ ನೊವೆನಾ ಪ್ರಾರ್ಥನೆ ನೆರವೇರಿಸಲಿದ್ದಾರೆ.
ದ. ಕ., ಉಡುಪಿ ಸಹಿತ ದೇಶ ವಿದೇಶಗಳಲ್ಲಿ ಕೆಥೋಲಿಕರು ಈ ಆಚರಣೆ ನಡೆಸುತ್ತಾರೆ. ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ| ವಂ| ಡಾ| ಪೀಟರ್‌ಪಾವ್ಲ್ ಸಲ್ಡಾನ್ಹಾ ಅವರು ಬಿಷಪ್ ಹೌಸ್‌ನಲ್ಲಿ ಬಲಿಪೂಜೆ ನೆರವೇರಿಸಿ ನೊವೆನಾ ಪ್ರಾರ್ಥನೆ ನಡೆಸಲಿದ್ದಾರೆ.

