Dailyhunt Logo
  • Light mode
    Follow system
    Dark mode
    • Play Story
    • App Story
ಮರಾಠಿ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಮರಾಠಿ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಮುಂಬೈ: ಮಹಾರಾಷ್ಟ್ರದ ಕ್ಯಾಬ್ ಚಾಲಕರಿಗೆ ಮರಾಠಿ ಕಲಿಕೆ ಕಡ್ಡಾಯಗೊಳಿಸಿದ್ದ ಮಹಾರಾಷ್ಟ್ರ ಸರ್ಕಾರದ ಆದೇಶದ ವಿರುದ್ಧ ಕ್ಯಾಬ್ ಚಾಲಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಶನಿವಾರದಂದು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘೂಗೆ ಮತ್ತು ನ್ಯಾ.

ಗೌತಮ್ ಅಂಖಡ್‌ ಅವರುಳ್ಳ ಪೀಠಕ್ಕೆ ಸರ್ಕಾರದ ಪರವಾಗಿ ವಿವರಣೆ ಸಲ್ಲಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಚವ್ಹಾಣ್, ಮರಾಠಿ ಕಲಿಕೆ ಕಡ್ಡಾಯದ ಅವಧಿಯನ್ನು ಇತ್ತೀಚೆಗೆ ಸರ್ಕಾರ ಒಂದು ವರ್ಷದವರೆಗೆ ವಿಸ್ತರಿಸಿದೆ ಎಂದು ತಿಳಿಸಿದರು. ಜ್ಯೋತಿಯವರ ವಿವರಣೆಯಿಂದ ಸಮಾಧಾನಗೊಂಡ ಪೀಠ, ಟ್ಯಾಕ್ಸಿ ಚಾಲಕರ ಅರ್ಜಿಯನ್ನು ವಜಾಗೊಳಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Udayavani