Dailyhunt Logo
  • Light mode
    Follow system
    Dark mode
    • Play Story
    • App Story
ಮತಾಂತರಿ ಮುಸ್ಲಿಮರಿಗೆ  ಮೀಸಲು ರದ್ದು ವಿರುದ್ಧ  ತಮಿಳುನಾಡು ಸುಪ್ರೀಂಗೆ

ಮತಾಂತರಿ ಮುಸ್ಲಿಮರಿಗೆ ಮೀಸಲು ರದ್ದು ವಿರುದ್ಧ ತಮಿಳುನಾಡು ಸುಪ್ರೀಂಗೆ

ಚೆನ್ನೈ: ಇಸ್ಲಾಂಗೆ ಮತಾಂತರವಾದವರಿಗೆ ಹಿಂದುಳಿದ ವರ್ಗಗಳ ಅಡಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಹಿಂದುಳಿದ ಹಾಗೂ ಅತೀ ಹಿಂದುಳಿದ, ಎಸ್‌ಸಿ ವರ್ಗದ ವ್ಯಕ್ತಿಯೊಬ್ಬ ಇಸ್ಲಾಂಗೆ ಮತಾಂತರವಾದರೂ ಆತ ಮೀಸಲಾತಿಗೆ ಅರ್ಹ ಎಂಬ ಕಾನೂನನ್ನು 2024ರಲ್ಲಿ ಅಂದಿನ ಡಿಎಂಕೆ ಸರಕಾರ ಜಾರಿಗೆ ತಂದಿತ್ತು.

ಇದನ್ನು ಮದ್ರಾಸ್‌ ನ್ಯಾಯಾಲಯ ರದ್ದು ಮಾಡಿತ್ತು ಹಾಗೂ ಇಸ್ಲಾಂಗೆ ಮತಾಂತರವಾದ ವ್ಯಕ್ತಿಯನ್ನು ಒಬ್ಬ ಮುಸಲ್ಮಾನ ಎಂದು ಗುರುತಿಸಬಹುದೇ ವಿನಾ ಆತ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿಗೆ ಅರ್ಹ ಎಂದು ಹೇಳಲಾಗದು ಎಂದು ಹೇಳಿತ್ತು. ಇದೀಗ ಈ ಆದೇಶದ ವಿರುದ್ಧ ವಿಜಯ್‌ ಸರಕಾರ ಸುಪ್ರೀಂಗೆ ಹೋಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani