Dailyhunt
ಮೊದಲ ಹಂತ ಮುಗಿಸಿದ 'ನೀ ಸಿಗೋವರೆಗೂ': ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ 'ನೀ ಸಿಗೋವರೆಗೂ': ಶಿವಣ್ಣ ಈಗ ಸೇನಾಧಿಕಾರಿ

ಶಿವರಾಜ್‌ ಕುಮಾರ್‌ ಅಭಿನಯದ “ನೀ ಸಿಗೋವರೆಗೂ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಜಮ್ಮು ಕಾಶ್ಮೀರ ಹಾಗೂ ಯುಎಸ್‌ಎ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಶಿವರಾಜ ಕುಮಾರ್‌ ಈ ಚಿತ್ರದಲ್ಲಿ ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಲುಕ್‌ ದಸರಾದ ಶುಭ ಸಂದರ್ಭದಲ್ಲಿ ಅನಾವರಣಗೊಂಡಿದೆ. ಇದು ಶಿವರಾಜ ಕುಮಾರ್‌ ಅಭಿನಯದ 124ನೇ ಚಿತ್ರವೂ ಹೌದು.

ಭಾವನಾತ್ಮಕ ಪ್ರೇಮಕಥಾಹಂದರದ ಈ ಚಿತ್ರವನ್ನು ರಾಮ್‌ ಧೂಲಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೆಹ್ರಿನ್‌ ಪಿರ್ಜಾದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಉಳಿದಂತೆ ನಾಜರ್‌, ಸಾಧುಕೋಕಿಲ, ಸಂಪತ್‌ ಕುರ್ಮಾ, ಮಂಗ್ಲಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನ, ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani