Dailyhunt Logo
  • Light mode
    Follow system
    Dark mode
    • Play Story
    • App Story
ಮೊಜ್ತಬಾ ಖಮೇನಿ ಮೇಲೆ ಹಲವು ಬಾರಿ ಅಮೆರಿಕ ದಾಳಿ ನಡೆಸಿತ್ತು: ಹೈದರಿ

ಮೊಜ್ತಬಾ ಖಮೇನಿ ಮೇಲೆ ಹಲವು ಬಾರಿ ಅಮೆರಿಕ ದಾಳಿ ನಡೆಸಿತ್ತು: ಹೈದರಿ

ಟೆಹ್ರಾನ್‌: ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿದಾಳಿಗೆ ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಹಲವು ಬಾರಿ ತುತ್ತಾಗಿದ್ದರು ಎಂದು ಇರಾನ್‌ ಧರ್ಮಗುರುಗಳ ಸಭೆಯ ಸದಸ್ಯ ಮೊಹ್ಸೆನ್‌ ಹೈದರಿ ಕತಾರಿ ಹೇಳಿದ್ದಾರೆ.

'ಅಲ್‌ ಅರಬಿ' ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಆಯತ್ತೋಲ್ಲಾ ಅಲಿ ಖಮೇನಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಮೊಜ್ತಾಬಾ ಗಾಯಗೊಂಡಿದ್ದರು.

ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಯಲ್ಲಿ ಆಸ್ಪತ್ರೆ ಸಂಪೂರ್ಣ ಕುಸಿದು ಮೊಜ್ತಬಾ ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು. ಬಳಿಕ ಅವರನ್ನು ಅಲ್ಲಿಂದ ಹೊರತೆಗೆದು ಅಜ್ಞಾತ ಸ್ಥಳಕ್ಕೆ ಸಾಗಿಸಲಾಯಿತು ಎಂದು ಅವರು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani