Dailyhunt Logo
  • Light mode
    Follow system
    Dark mode
    • Play Story
    • App Story
ಮೊಮ್ಮಗನ ಸಾವಿನ ಆಘಾತ: ಕೇತನ್‌ ಅಗರ್ವಾಲ್ ಅಜ್ಜ ಸಾವು

ಮೊಮ್ಮಗನ ಸಾವಿನ ಆಘಾತ: ಕೇತನ್‌ ಅಗರ್ವಾಲ್ ಅಜ್ಜ ಸಾವು

ಪುಣೆ: ಲೋಹಗಢ ಕೋಟೆಯಲ್ಲಿ ಭಾವಿ ಪತ್ನಿ, ಆಕೆಯ ಪ್ರಿಯಕರನಿಂದ ಹತ್ಯೆಗೊಳಗಾದ ಪುಣೆಯ ಉದ್ಯಮಿ ಕೇತನ್‌ ಅಗರ್ವಾಲ್‌ ಅವರ ಅಜ್ಜ (ತಂದೆಯ ಅಪ್ಪ) ದೇವಿಚಂದ್‌ ಅಗರ್ವಾಲ್‌ ಭಾನುವಾರ ಮೃತಪಟ್ಟಿದ್ದಾರೆ.

ಮೊಮ್ಮಗನ ಸಾವಿನ ಶೋಕದಲ್ಲಿ ಮುಳುಗಿದ್ದ ಅವರು ಅದೇ ನೋವಿನಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಿಂಗಳೊಳಗೆ ಇಬ್ಬರ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಹೃದಯಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊಮ್ಮಗನ ಸಾವಿನ ಬಳಿಕ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani