ತುಮಕೂರು: ತುಮಕೂರು ತಾಲೂಕಿನ ಗೂಳೂರಿನಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮಾಡಳಿತಧಿಕಾರಿ ಭುವನಾ ಸಾವು ಪ್ರರಕಣಕ್ಕೆ ಸಂಬಂಧಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಶನಿವಾರದಿಂದ ಡೀಸಿ ಕಚೇರಿ ಎದುರು ನೌಕರರು ನಡೆಸುತ್ತಿದ್ದ ಪ್ರತಿಭಟನೆ ಭಾನುವಾರವೂ ಮುಂದುವರಿದಿತ್ತು.
ಸ್ಥಳಕ್ಕೆ ಬಂದ ಡಿಸಿಎಂ ಡಾ.ಜಿ.ಪರಮೇಶ್ವರ್ ಕಂದಾಯ ನೌಕರರ ಮನವಿ ಆಲಿಸಿ, ಮೃತರ ಕುಟುಂಬಸ್ಥರಿಗೆ 15 ದಿನದೊಳಗೆ ವಿಮೆ ಹಣ ಬರಲಿದೆ. ಚುನಾವಾಣಾ ಆಯೋಗದಿಂದ 30 ಲಕ್ಷ ರೂ. ಪರಿಹಾರ ಹಾಗೂ ಅನುಕಂಪದ ಆಧಾರದಲ್ಲಿ ಉದ್ಯೋಗ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹೋರಾಟ ಕೈಬಿಟ್ಟರು.
ನಾನು ಘಟನೆ ನಡೆದ ದಿನವೇ ಬರಬೇಕಿತ್ತು. ಆದರೆ, ಅನಾರೋಗ್ಯದಿಂದ ಬರಲು ಸಾಧ್ಯವಾಗಲಿಲ್ಲ. ವರದಿ ತರಿಸಿಕೊಂಡು ಪರಿಶೀಲಿಸುತ್ತೇನೆಂದರು.
ಭುವನಾ ಪ್ರಕರಣ ಒತ್ತಡದಿಂದ ಆಗಿದೆಯೋ ಅಥವಾ ಬೇರೆ ಕಾರಣವಿದೆಯೋ ಎಂಬ ಬಗ್ಗೆ ತನಿಖೆ ನಡೆಸುತ್ತೇನೆ. ಭುವನಾ ಸಾವಿಗೆ ಯಾರ ಒತ್ತಡ ಕಾರಣ ಎಂಬುದನ್ನು ಶೀಘ್ರ ಪತ್ತೆ ಹಚ್ಚಲಾಗುವುದು. ಇದರಲ್ಲಿ ರಾಜಕಾರಣ ಬೇಡ.-ಡಾ.ಜಿ. ಪರಮೇಶ್ವರ್, ಡಿಸಿಎಂ

