ಬ್ರಹ್ಮಾವರ: ಕಾಡೂರು ಗ್ರಾಮ ಮುಂಡಾಡಿಯ ನಾಗೇಶ್ ಆಚಾರ್ಯ (41) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮದ್ಯ ಸೇವನೆ ಹವ್ಯಾಸ ಹೊಂದಿದ್ದ ಅವರು ಬುಧವಾರ ಶಿರೂರು ಮೂರುಕೈ ಬಾರ್ ನ ಶೌಚಾಲಯದಲ್ಲಿ ಬಿದ್ದಿದ್ದರು. ಅಲ್ಲಿಂದ ಮನೆಗೆ ಕರೆದುಕೊಂಡು ಬಂದಿದ್ದು, ಗುರುವಾರ ಚಿಕಿತ್ಸೆಗಾಗಿ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

