ನವದೆಹಲಿ: ಮುಂಗಡ ಪಾವತಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿಕೊಳ್ಳುವುದು ಗ್ರಾಹಕರಿಗೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಮಾತನಾಡಿದ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್, ಖಾಸಗಿ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿದಂತೆ ಸಾಮಾನ್ಯ ಜನರಿಗೂ ಇಂತಹ ಮೀಟರ್‌ಗಳನ್ನು ಕೇಂದ್ರವು ಕಡ್ಡಾಯಗೊಳಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು.
ಸತತವಾಗಿ ವಿದ್ಯುತ್ ಬಿಲ್ ಕಟ್ಟದೆ ನುಣುಚಿಕೊಳ್ಳುವ ಸತತ ಸುಸ್ತಿದಾರರ ಸಮಸ್ಯೆ ಹೆಚ್ಚುತ್ತಿರುವುದರಿಂದ ಖಾಸಗಿ ಸಂಸ್ಥೆಗಳಿಗೆ ಮುಂಗಡ ಪಾವತಿ ಮೀಟರ್‌ಗಳಿಗೆ ಬದಲಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಖಟ್ಟರ್ ತಿಳಿಸಿದರು.

