Dailyhunt Logo
  • Light mode
    Follow system
    Dark mode
    • Play Story
    • App Story
ಮ್ಯಾಪ್‌ ವಿವಾದ: ಲಿಖಿತ ವಿವರಣೆ ನೀಡಲು ಟ್ವಿಟರ್‌ಗೆ ಸಮಿತಿ ಸೂಚನೆ

ಮ್ಯಾಪ್‌ ವಿವಾದ: ಲಿಖಿತ ವಿವರಣೆ ನೀಡಲು ಟ್ವಿಟರ್‌ಗೆ ಸಮಿತಿ ಸೂಚನೆ

ಹೊಸದಿಲ್ಲಿ: ಲೇಹ್‌ ಅನ್ನು ಚೀನದ ಭಾಗ ಎಂದು ತೋರಿಸಿದ ಟ್ವಿಟರ್‌ ಕ್ರಮಕ್ಕೆ ಮಾಹಿತಿ ಸಂರಕ್ಷಣಾ ವಿಧೇಯಕ ಪರಿಶೀಲನೆಗಾಗಿನ ಸಂಸತ್‌ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ ಈ ಬಗ್ಗೆ ಲಿಖಿತವಾಗಿ ವಿವರಣೆ ನೀಡುವಂತೆ ಮೈಕ್ರೋಬ್ಲಾಗಿಂಗ್‌ ಜಾಲತಾಣಕ್ಕೆ ಸೂಚಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷೆ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಬುಧವಾರ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಮಿತಿ ಮುಂದೆ ಹಾಜರಾಗುವ ಬದಲು ಕಿರಿಯ ದರ್ಜೆಯ ಅಧಿಕಾರಿಗಳನ್ನು ಸಮಿತಿ ಮುಂದೆ ಕಳುಹಿಸಿದ್ದಕ್ಕೆ ಸಂಸತ್‌ ಸಮಿತಿ ತನ್ನ ಅತೃಪ್ತಿ ವ್ಯಕ್ತಪಡಿಸಿದೆ.

ಲೇಹ್‌ ಭೂಪಟ ವಿವಾದ ಮಾತ್ರವಲ್ಲದೆ, ಅಪ್‌ಲೋಡ್‌ ಮಾಡುವ ಮಾಹಿತಿಗಳನ್ನು ಯಾವ ಆಧಾರದಲ್ಲಿ ಮ್ಯೂಟ್‌ ಮಾಡಲಾಗುತ್ತದೆ ಮತ್ತು ವೈಭವೀಕರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನೂ ಸಮಿತಿ ಪಡೆದುಕೊಂಡಿದೆ.

ಭಾರತದ ಕಾನೂನುಗಳು ಮತ್ತು ಸೂಕ್ಷ್ಮ ವಿಚಾರಗಳ ಬಗೆಗಿನ ವ್ಯತ್ಯಾಸ ವನ್ನು ಟ್ವಿಟರ್‌ ಅರಿಯುವುದು ಸೂಕ್ತ ವೆಂದು ಸಮಿತಿ ಸದಸ್ಯರು ಜಾಲತಾಣದ ಅಧಿಕಾರಿಗಳಿಗೆ ವಿವರಿಸಿದ್ದಾರೆ.

ಮತ್ತೂಂದು ಬೆಳವಣಿಗೆಯಲ್ಲಿ ವೈಯಕ್ತಿಕ ಮಾಹಿತಿ ಕುರಿತಂತೆ ಸಂಸತ್‌ನ ಸಮಿತಿ ರಿಲಯನ್ಸ್‌ ಜಿಯೋ, ಏರ್‌ಟೆಲ್‌, ಕ್ಯಾಬ್‌ ಸೇವೆ ಪೂರೈಕೆ ಸಂಸ್ಥೆಗಳಾಗಿರುವ ಯೂಬರ್‌, ಒಲಾಗಳಿಗೆ ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಮತ್ತು ಜಿಯೋಗೆ ನ.4, ಓಲಾ ಮತ್ತು ಯೂಬರ್‌ಗೆ ನ.5, ನ.6ರಂದು ಏರ್‌ಟೆಲ್‌ ಮತ್ತು ಟ್ರೂ ಕಾಲರ್‌ ಸಂಸ್ಥೆಗಳಿಗೆ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani