Dailyhunt Logo
  • Light mode
    Follow system
    Dark mode
    • Play Story
    • App Story
ನಾಗರಿಕರು ನಿರಾಳ: ಪಾನ್-ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಿದ ಸರ್ಕಾರ

ನಾಗರಿಕರು ನಿರಾಳ: ಪಾನ್-ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಿದ ಸರ್ಕಾರ

ಹೊಸದಿಲ್ಲಿ: ಪಾನ್ ಮತ್ತು ಆಧಾರ್ ಲಿಂಕ್ ಮಾಡದೆ ಕಂಗಾಲಾಗಿದ್ದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ.

Encounter ಸ್ಪೆಷಲಿಸ್ಟ್ ದಯಾ ನಾಯಕ್ ಮತ್ತೆ ಎಟಿಎಸ್ ನಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗ!

2023ರ ಜುಲೈ 1ರಿಂದ, ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದನ್ನು 30 ದಿನಗಳ ಒಳಗೆ 1000 ರೂ ಶುಲ್ಕ ಕಟ್ಟಿ ಲಿಂಕ್ ಮಾಡಿಸಿ ಮತ್ತೆ ಕಾರ್ಯಗತಗೊಳಿಸಬಹುದು ಎಂದು ಇಲಾಖೆ ಸೂಚಿಸಿದೆ.

ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ ಹಲ ವಿಭಾಗಗಳಲ್ಲಿ ಬರುವ ಜನರಿಗೆ ವಿನಾಯ್ತಿ ನೀಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani