Dailyhunt
ನಾವು ಯುದ್ಧದಲ್ಲಿಲ್ಲ, ಕೇವಲ ಹೊರ್ಮುಜ್‌ ಕಾಯ್ತಿದ್ದೇವೆ!

ನಾವು ಯುದ್ಧದಲ್ಲಿಲ್ಲ, ಕೇವಲ ಹೊರ್ಮುಜ್‌ ಕಾಯ್ತಿದ್ದೇವೆ!

ವಾಷಿಂಗ್ಟನ್‌: ಇರಾನ್‌ ಮೇಲೆ ಡೊನಾಲ್ಡ್‌ ಟ್ರಂಪ್‌ ಸಾರಿರುವ ಯುದ್ಧಕ್ಕೆ ಶುಕ್ರವಾರಕ್ಕೆ 60 ದಿನ ಆಗುತ್ತಿದ್ದು, ಈ ನಡುವೆ ಅಮೆರಿಕ ಕಾಂಗ್ರೆಸ್‌ ಸ್ಪೀಕರ್‌ ಜಾನ್ಸನ್‌, "ನಾವು ಯುದ್ಧದಲ್ಲಿಲ್ಲ, ಕೇವಲ ಹೊರ್ಮುಜ್‌ ಜಲಸಂಧಿಯಲ್ಲಿ ಕಾವಲು ಕಾಯುತ್ತಿದ್ದೇವೆ ಮತ್ತು ಶಾಂತಿಗಾಗಿ ಪ್ರಯತ್ನಿಸುತ್ತಿದ್ದೇವೆ ಅಷ್ಟೆ' ಎಂದು ಗುರುವಾರ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಸ್ಪೀಕರ್‌, ಅಮೆರಿಕ ಇರಾನ್‌ ಮೇಲೆ ಕೈಗೊಂಡಿ ರುವುದು ಮಿಲಿಟರಿ ಕಾರ್ಯಾಚರಣೆ ಮಾತ್ರ. ಇರಾನ್‌ನಲ್ಲಿ ಅಮೆರಿಕ ನಡೆಸಿದ್ದು ನಿರ್ದಿಷ್ಟ ದಾಳಿ. ಹೀಗಾಗಿ ಸಂಸತ್ತಿನ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಲ್ಲ. ಮಾತಿನ ಭರದಲ್ಲಿ ಅಧ್ಯಕ್ಷ ಟ್ರಂಪ್‌ ಇದನ್ನು ಯುದ್ಧ ಎಂದು ಕರೆದಿದ್ದಾರೆ. ಆದರೆ ಅಮೆರಿಕ ಸರಕಾರವಾಗಲೀ, ಶ್ವೇತಭವನವಾಗಲೀ ಇದನ್ನು ಯುದ್ಧ ಎಂದು ಕರೆದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ಕಾನೂನು ಪ್ರಕಾರ, ಕಾಂಗ್ರೆಸ್‌ ಅನುಮತಿ ನೀಡದಿದ್ದರೆ ಅಧ್ಯಕ್ಷರು 60 ದಿನಗಳೊಳಗೆ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಅದರೆ ಅಧ್ಯಕ್ಷರು ಬೇಕಿದ್ದರೆ ಹೆಚ್ಚುವರಿ 30 ದಿನಗಳ ಕಾಲಾವಕಾಶ ಕೇಳಬಹುದು, ಆದರೆ ಟ್ರಂಪ್‌ ಈ ಬಗ್ಗೆ ಇನ್ನು ಯಾವುದೇ ನಿರ್ಧಾರ ತಿಳಿಸಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Udayavani