ಕೇಪ್ ಕೆನವೆರಾಲ್: ಭೂಮಿಗೆ ಬೀಳುತ್ತಿರುವ ನಾಸಾದ ಸ್ವಿಫ್ಟ್ ಟೆಲಿಸ್ಕೋಪನ್ನು ರಕ್ಷಣೆ ಮಾಡುವ ಕಾರ್ಯವನ್ನು ನಾಸಾ ಶುಕ್ರವಾರ ಆರಂಭಿಸಿದೆ. ಈ ರಕ್ಷಣೆಗಾಗಿ ಕ್ಯಾಟಲಿಸ್ಟ್ ಸ್ಪೇಸ್ ಟೆಕ್ನಾಲಜಿಯ ಸಹಾಯವನ್ನು ಇಸ್ರೋ ಪಡೆದುಕೊಂಡಿದ್ದು, 250 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಕ್ಯಾಟಲಿಸ್ಟ್ ಸಂಸ್ಥೆಯು ಈ ರಕ್ಷಣಾ ಕಾರ್ಯಾಚರಣೆಗಾಗಿ ತಯಾರಿಸಿರುವ 'ಲಿಂಕ್ ಸ್ಪೇಸ್ಕ್ರಾಫ್ಟ್' ನೌಕೆಯನ್ನು ಶುಕ್ರವಾರ ಉಡಾವಣೆ ಮಾಡಲಾಗಿದೆ. ಇದು 1 ತಿಂಗಳಲ್ಲಿ ಟೆಲಿಸ್ಕೋಪನ್ನು ತಲುಪಲಿದ್ದು, ಭೂಮಿಯ ವಾತಾವರಣದಿಂದ ಉಪಗ್ರಹವನ್ನು ದೂರ ತಳ್ಳುವ ಕಾರ್ಯವನ್ನು ಕೈಗೊಳ್ಳಲಿದೆ. ಇದಕ್ಕಾಗಿಯೇ 'ಲಿಂಕ್'ನಲ್ಲಿ 3 ಬಾಹುಗಳನ್ನು ನಿರ್ಮಾಣ ಮಾಡಲಾಗಿದ್ದು, ಇವು ಟೆಲಿಸ್ಕೋಪನ್ನು ಹೊತ್ತು ಮೇಲೇರಲಿವೆ. ಒಂದು ವೇಳೆ ಎಲ್ಲವೂ ಯೋಜನೆಯಂತೆ ನಡೆದರೆ ಸೆಪ್ಟೆಂಬರ್ ತಿಂಗಳಿನಿಂದ ಟೆಲಿಸ್ಕೋಪ್ ತನ್ನ ಕೆಲಸವನ್ನು ಮತ್ತೆ ಆರಂಭಿಸಲಿದೆ.
ಟೆಲಿಸ್ಕೋಪ್ ಬೀಳುತ್ತಿರುವುದೇಕೆ?
ಇತ್ತೀಚಿತ ವರ್ಷಗಳಲ್ಲಿ ಸೌರಜ್ವಾಲೆಯ ಪ್ರಮಾಣ ಹೆಚ್ಚಾಗಿದ್ದು, ಇದು ಭೂಮಿಯ ವಾತಾವರಣದ ಗಾತ್ರವನ್ನು ಹಿಗ್ಗಿಸಿದೆ. ಹೀಗಾಗಿ ಟೆಲಿಸ್ಕೋಪ್ ಭೂಮಿಯತ್ತ ಆಕರ್ಷಿತವಾಗಿದ್ದು, ನಿಧಾನವಾಗಿ ಭೂಮಿಯತ್ತ ಇಳಿಯಲು ಆರಂಭಿಸಿದೆ. ಇದನ್ನು ತಡೆಯದಿದ್ದ ಪಕ್ಷದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿ ಬೂದಿಯಾಗಲಿದೆ.

