Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ ದುರಂತ: ಹಿಮಾಲಯದ ನೀರ್ಗಲ್ಲುಗಳ ಮೇಲೆ ಭಾರತ ನಿಗಾ

ನೇಪಾಳ ದುರಂತ: ಹಿಮಾಲಯದ ನೀರ್ಗಲ್ಲುಗಳ ಮೇಲೆ ಭಾರತ ನಿಗಾ

ವದೆಹಲಿ: ನೇಪಾಳದಲ್ಲಿ ಭಾರಿ ಪ್ರವಾಹ ಸಂಭವಿಸಿದ ಬೆನ್ನಲ್ಲೆ ಚೀನಾ ಹಾಗೂ ನೇಪಾಳದ ಗಡಿಗೆ ಹೊಂದಿಕೊಂಡಂತಿರುವ ಹಿಮಾಲಯ ವಲಯದಲ್ಲಿನ ನೀರ್ಗಲ್ಲುಗಳ ಮೇಲೆ ಭಾರತ ತೀವ್ರ ನಿಗಾ ವಹಿಸಿಎ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ನೇಪಾಳದೊಂದಿಗೆ ಭಾರತವೂ ಗಡಿ ಹಂಚಿಕೊಂಡಿದೆ.

ನೇಪಾಳದಲ್ಲಿ ಪ್ರವಾಹ ಸೃಷ್ಟಿಯಾದಂತಹ ಪ್ರದೇಶಗಳು ಭಾರತದ ಗಡಿಯಲ್ಲೂ ಇದೆ. ಹೀಗಾಗಿ ಒಂದೇ ತೆರನಾದ ಭೌಗೋಳಿಕ ಪರಿಸ್ಥಿತಿ ಇರುವುದರಿಂದ ಎಲ್ಲಾ ನೀರ್ಗಲ್ಲುಗಳು ಮತ್ತು ಹಿಮನದಿಗಳ ಮೇಲೆ ನಿಗಾ ಇಡಬೇಕು. ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಉತ್ತರಾಖಂಡದ ವಿಪತ್ತು ನಿರ್ವಹಣಾ ಸಚಿವ ಮದನ್ ಕೌಶಿಕ್ ಹೇಳಿದ್ದಾರೆ.

ಉತ್ತರಾಖಂಡವು ದೇಶದಲ್ಲಿ ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ 1,266 ಹಿಮ ನದಿಗಳಿವೆ. ಸುಮಾರು 200 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸಬಲ್ಲ ನೀರ್ಗಲ್ಲುಗಳು ಇಲ್ಲಿವೆ. ತಾಪಮಾನ ಏರಿಕೆಯಿಂದಾಗಿ ವೇಗವಾಗಿ ಕರಗುತ್ತಿವೆ. ಪರಿಣಾಮ ಭೀಕರ ದುರಂತಗಳು ಸಂಭವಿಸುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ನೀರ್ಗಲ್ಲು ಹಾಗೂ ಪೆರ್ಮಫಾಸ್ಟ್ (ಹೆಪ್ಪುಗಟ್ಟಿದ ನೆಲ) ಕರಗುವುದರಿಂದ ಪರ್ವತಗಳ ಇಳಿಜಾರು ಅಸ್ಥಿರಗೊಂಡು, ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani