Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ ದುರಂತದ ಬಗ್ಗೆ 5 ತಿಂಗಳ ಹಿಂದೆ ತಜ್ಞರಿಂದ ಎಚ್ಚರಿಕೆ!

ನೇಪಾಳ ದುರಂತದ ಬಗ್ಗೆ 5 ತಿಂಗಳ ಹಿಂದೆ ತಜ್ಞರಿಂದ ಎಚ್ಚರಿಕೆ!

ವದೆಹಲಿ: ಭೀಕರ ಭೂಸುನಾಮಿಯು ನೇಪಾಳವನ್ನು ಅಪ್ಪಳಿಸುವ ಸರಿಯಾಗಿ 5 ತಿಂಗಳ ಹಿಂದೆ, ಮುಂಬರಲಿರುವ ಅಪಾಯದ ಬಗ್ಗೆ 2 ಸಂಶೋಧನಾ ವರದಿಗಳು ಎಚ್ಚರಿಕೆ ನೀಡಿದ್ದವು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಹಿಂದೂ ಕುಷ್‌ ಹಿಮಾಲಯದಾದ್ಯಂತ ನೀರ್ಗಲ್ಲುಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಕರಗುತ್ತಿದ್ದು, ಭಾರೀ ಪ್ರಮಾಣದಲ್ಲಿ ನೀರ್ಗಲ್ಲುಗಳು ನಷ್ಟವಾಗುತ್ತಿವೆ ಎಂದು ಹಿಂದೂ ಕುಷ್‌ ಹಿಮಾಲಯದ(ಎಚ್‌ಕೆಎಚ್‌) ಜನರ ಪರ ಕಾರ್ಯನಿರ್ವಹಿಸುವ ಅಂತರ್‌ ಸರ್ಕಾರಿ ಕೇಂದ್ರವೊಂದು ವರದಿ ನೀಡಿತ್ತು.

2000ದಿಂದೀಚೆಗೆ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ.

1975ರಿಂದ ಈವರೆಗೆ ಹಿಮದ ದಪ್ಪವು ಸುಮಾರು 27 ಮೀ.ಗಳಷ್ಟು ಕಡಿಮೆಯಾಗಿದೆ. ಹಿಮಾಲಯದ ಮಡಿಲಲ್ಲಿ ವಾಸವಿರುವ ಸುಮಾರು 2 ಶತಕೋಟಿ ಜನರು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂದು ಕಠ್ಮಂಡು ಮೂಲದ ಅಂತಾರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರದ ವರದಿ ತಿಳಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani