Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಲ ಪ್ರವಾಹ: ನಿವೃತ್ತ ಎಸ್‌ಐ ಸಹಿತ ಕಾಸರಗೋಡಿನ ಹಲವರು ಪಾರು

ನೇಪಾಲ ಪ್ರವಾಹ: ನಿವೃತ್ತ ಎಸ್‌ಐ ಸಹಿತ ಕಾಸರಗೋಡಿನ ಹಲವರು ಪಾರು

ಕಾಸರಗೋಡು: ನೇಪಾಲದಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದಿಂದ ಕಾಂಞಂಗಾಡ್‌ನ‌ ನಿವೃತ್ತ ಎಸ್‌ಐ ಸಹಿತ ಕಾಸರಗೋಡು ಜಿಲ್ಲೆಯ ಹಲವರು ಅಪಾಯದಿಂದ ಪಾರಾಗಿದ್ದಾರೆ.

ನಿವೃತ್ತ ಎಸ್‌ಐ ಪ್ರದೀಪ್‌ ಕುಮಾರ್‌, ಪೆರಿಯ ಪಾಲಿಟೆಕ್ನಿಕ್‌ನ ಅಧ್ಯಾಪಕ ರಾಜನ್‌, ಚೆರುವತ್ತೂರು ವಲಿಯಪೊಯಿಲಿನ ಅಧ್ಯಾಪಕ ಅನಿಲ್‌ ಸಹಿತ ಹಲವರು ಪ್ರವಾಹ ಸಂದರ್ಭದಲ್ಲಿ ಅನಾಹುತ ಸಂಭವಿಸಿದ ಪ್ರದೇಶದಿಂದ ಕೆಲವು ಕಿ.ಮೀ.ಗಳಷ್ಟೇ ದೂರದಲ್ಲಿದ್ದರು.

ಕೋಟ್ಟಾಯಂ, ಎರ್ನಾಕುಳಂ ಸಹಿತ ವಿವಿಧ ಜಿಲ್ಲೆಗಳ ಒಟ್ಟು 36 ಮಂದಿ ಪ್ರವಾಸದಲ್ಲಿದ್ದರು. ಆ. 23ರಂದು ಎರ್ನಾಕುಳಂನಿಂದ ಟ್ರಾವೆಲ್‌ ಏಜೆನ್ಸಿ ಮೂಲಕ ಪ್ರವಾಸಕ್ಕೆ ತೆರಳಿದ್ದು, ಕಾಠ್ಮಂಡುವಿನಿಂದ ಪ್ರಯಾಣಿಸುತ್ತಿದ್ದ ವೇಳೆ ಬೆಳಗ್ಗೆ ಪ್ರವಾಹ ಸಂಭವಿಸಿತು. ಇನ್ನಷ್ಟು ಮುಂದೆ ಸಾಗಿದ್ದರೆ ಪ್ರವಾಹದಲ್ಲಿ ಕೊಚ್ಚಿಹೋದ ಎರಡು ಸೇತುವೆಗಳ ನಡುವೆ ಸಿಲುಕಿಕೊಳ್ಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದೇವೆ. ಸುಮಾರು 60 ಕಿ.ಮೀ.ಗಳಷ್ಟು ಕಾಡಿನ ಮೂಲಕ ಪ್ರಯಾಣಿಸಿ ಸುರಕ್ಷಿತ ಸ್ಥಳ ತಲುಪಬೇಕಾಯಿತು ಎಂದು ಪ್ರದೀಪ್‌ ಕುಮಾರ್‌ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani