ಟಾಪ್ 10 ಸುದ್ದಿ
ನಿಮ್ಮ ಗ್ರಹಬಲ: ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು..!

04-03-2021
ಮೇಷ: ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಜೀವನದ ಈ ವರ್ಷದ ಮೇಲೆ ಪ್ರಭಾವವನ್ನು ಬೀರಲಿದೆ. ಸಾಮಾಜಿಕವಾಗಿ ನಿಮಗೆ ಉತ್ತಮ ಸ್ಥಾನಮಾನ, ಗೌರವಗಳು ಲಭಿಸಲಿದೆ. ಶುಭವಿದೆ.
ವೃಷಭ: ಆರ್ಥಿಕ ವಿಚಾರದಲ್ಲಿ ಆಗಾಗ ಧನವ್ಯಯ ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವಿರುತ್ತದೆ. ಬದಲಾವಣೆಯು ಕಂಡುಬರಲಿದೆ. ದೈವಾನುಗ್ರಹದಿಂದ ಕೆಲಸಕಾಲದಲ್ಲಿ ಜಯವಿದೆ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಯನ್ನು ಹಾಕಿಕೊಳ್ಳಿರಿ. ಯಶಸ್ಸು ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯವಹಾರದಲ್ಲಿ ಮುನ್ನಡೆ ಸಾಧಿಸಲಿದೆ.
ಕರ್ಕ: ಕಾರ್ಯರಂಗದಲ್ಲಿ ಹಾಗೂ ಜೀವನ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜೀವನದಲ್ಲಿ ಹೊಂದಿಕೊಳ್ಳುವುದು ಅಗತ್ಯವಿದೆ. ಹಾಗೂ ಯಾವುದರಲ್ಲೂ ಆತುರ ತೋರಿ ಖಚಿತ ನಿರ್ಧಾರ ಕೈಗೊಳ್ಳದಿರಿ. ಪ್ರಯಾಣವಿದೆ.
ಸಿಂಹ: ಹಿತಶತ್ರುಗಳು ನಿಮ್ಮ ನಡವಳಿಕೆಯನ್ನು ಗಮನಿಸಲಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ಕೊಂಚ ಮುನ್ನಡೆ ಸಾಧಿಸುವಿರಿ. ಆರ್ಥಿಕ ಸಮಸ್ಯೆಗಳು ತೋರಿಬಂದರೂ ಅನಿರೀಕ್ಷಿತ ಧನಾಗಮನವು ತೋರಿಬರುವುದು.
ಕನ್ಯಾ: ಮಿಶ್ರಫಲಗಳು ನಿಮ್ಮ ಗೋಚರಕ್ಕೆ ಬಂದೀತು. ದೈವಾನುಗ್ರಹವು ಉತ್ತಮವಿದ್ದು ಶುಭ ಕಾಲವಾಗಿದೆ. ಉತ್ಸಾಹ ಹಾಗೂ ಚಟುವಟಿಕೆಯ ಕಾಲವಿದು. ವ್ಯವಹಾರ ಕ್ಷೇತ್ರ, ಉದ್ಯೋಗ, ವ್ಯಾಪಾರದಲ್ಲಿ ಅದೃಷ್ಟವಿರುತ್ತದೆ.
ತುಲಾ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಪರಿಹರಿಸಿಕೊಳ್ಳುವ ಆತ್ಮವಿಶ್ವಾಸ, ಪ್ರಯತ್ನಶೀಲತೆಯ ಶಕ್ತಿ ಪಡೆಯಲಿದ್ದೀರಿ. ಹಾಗೂ ಕುಟುಂಬದಲ್ಲಿ ಮೂಡಿಬಂದ ಭಿನ್ನಾಭಿಪ್ರಾಯವು ಸರಿ ಹೋಗಲಿದೆ.
ವೃಶ್ಚಿಕ: ಪರಸ್ಪರ ಅನ್ಯೋನ್ಯತೆ, ಸಹಕಾರ, ಸುಖ, ಸಂತೋಷ, ಸಮಾಧಾನಗಳು ಬೆಳೆಯಲಿದೆ. ಮನಸ್ಸಿನಲ್ಲಿ ಧನಾತ್ಮಕ ಶಕ್ತಿಗಳು ಬೆಳೆಯಲಿದೆ. ಕೆಲವೊಮ್ಮೆ ಮನಸ್ಸು ದುರ್ಬಲಗೊಂಡು ಕೋಪತಾಪಕ್ಕೆ ಒಳಗಾದೀತು.
ಧನು: ಕಾರ್ಯರಂಗದಲ್ಲಿ ಇದು ಅತ್ಯಂತ ಮಹತ್ವ ಪೂರ್ಣ ಹಾಗೂ ಸಂತೋಷದ ಕಾಲವೆನ್ನ ಬಹುದು. ವ್ಯಾಪಾರ, ವ್ಯವಹಾರಗಳು ವಾಸ್ತವಿಕ ರೂಪ ತಳೆದು ಸಂತೋಷ ಕಾಣಲಿದೆ. ಉದ್ಯೋಗರಂಗದಲ್ಲಿ ಮುನ್ನಡೆ ಸಾಧಿಸುವಿರಿ.
ಮಕರ: ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ತೋರಿಬರುವುದು. ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸವೇ ಕಾರಣವಾಗಲಿದೆ. ಮನೆಯಲ್ಲೂ, ಹಂತಹಂತವಾಗಿ ಸಮಾಧಾನವು ಕಂಡುಬರುವುದು. ಯಾರನ್ನೂ ನಂಬುವುದು ಬೇಡ.
ಕುಂಭ:ಆರ್ಥಿಕವಾಗಿ ಹಿನ್ನಡೆ ತೋರಿಬಂದರೂ, ಉದ್ಯೋಗರಂಗದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು. ಅತೀ ವಿಶ್ವಾಸ ಯಾರಲ್ಲೂ ಇಟ್ಟುಕೊಳ್ಳದಿರಿ. ಪ್ರಯಾಣವಿದೆ.
ಮೀನ: ಕಾರ್ಯಕ್ಷೇತ್ರದಲ್ಲಿ ಸಾಧಾರಣ ರೀತಿಯ ಬೆಳವಣಿಗೆ ತೋರಿಬಂದರೂ ಕೊಂಚ ಗೊಂದಲಕ್ಕೆ ಕಾರಣವಾಗುವ ಕೆಲವು ಸಮಸ್ಯೆಗಳು ತೋರಿಬಂದಾವು. ಕಾರ್ಯರಂಗದಲ್ಲಿ ನಿಮ್ಮನ್ನು ಹೆಚ್ಚು ಬಳಸಿಯಾರು. ಜಾಗ್ರತೆ ಮಾಡಿರಿ.
ಎನ್.ಎಸ್. ಭಟ್