Thursday, 03 Dec, 10.09 am ಉದಯವಾಣಿ

ರಾಜ್ಯ
ನೀರು ಕುಡಿಯಲು ನದಿಪಾತ್ರಕ್ಕೆ ತೆರಳಿದ ದನಗಾಹಿ ಬಾಲಕ ಮೊಸಳೆ ಪಾಲು: ರುಂಡ ಮಾತ್ರ ಪತ್ತೆ

ರಾಯಚೂರು: ತಾಲೂಕಿನ ಡಿ. ರಾಂಪುರ ಸಮೀಪದ ಕೃಷ್ಣ ನದಿ ಪಾತ್ರದಲ್ಲಿ ದನಗಾಹಿ ಬಾಲಕನನ್ನು ಮೊಸಳೆ ಬಲಿ ಪಡೆದ ಘಟನೆ ಬುಧವಾರ ಸಂಜೆ ನಡೆದಿದೆ.

ಗ್ರಾಮದ ಮಲ್ಲಿಕಾರ್ಜುನ (12) ಮೃತ ಬಾಲಕ. ಶಾಲೆಗಳು ಇಲ್ಲದ ಕಾರಣ ಮನೆಯ ಜಾನುವಾರು ಮೇಯಿಸಲು ನಾಲ್ಕೈದು ಬಾಲಕರು ಹೋಗಿದ್ದರು. ನೀರು ಕುಡಿಯಲು ನದಿ ಪಾತ್ರಕ್ಕೆ ಹೋದಾಗ ಮೊಸಳೆ ಬಾಲಕರು ಮೇಲೆ ದಾಳಿ ಮಾಡಿದೆ. ಈ ದೃಶ್ಯವನ್ನು ಉಳಿದ ಯುವಕರು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ವರ್ತೂರು ಪ್ರಕಾಶ್‌ ಅಪಹರಣದಲ್ಲಿ ಖಾಸಗಿ ಹೈಡ್ರಾಮಾ; ಮಹಿಳೆ ವಿಚಾರಕ್ಕೆ ನಡೆಯಿತಾ ಕಿಡ್ನಾಪ್?

ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಶೋಧ ಕಾರ್ಯ ನಡೆಸಿದ್ದು, ರಾತ್ರಿ 2 ಗಂಟೆಗೆ ಬಾಲಕನ ರುಂಡ ಮಾತ್ರ ಸಿಕ್ಕಿದೆ. ಯಾಪಲದಿನ್ನಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top