Dailyhunt Logo
  • Light mode
    Follow system
    Dark mode
    • Play Story
    • App Story
ನ್ಯಾಷನಲ್‌ ಬ್ಯಾಂಕ್‌ ಓಪನ್‌: ರಿಬಾಕಿನಾ, ಸ್ವಿಯಾಟೆಕ್ ಫೈನಲ್‌ಗೆ

ನ್ಯಾಷನಲ್‌ ಬ್ಯಾಂಕ್‌ ಓಪನ್‌: ರಿಬಾಕಿನಾ, ಸ್ವಿಯಾಟೆಕ್ ಫೈನಲ್‌ಗೆ

ಟೊರೊಂಟೊ: ನ್ಯಾಷನಲ್‌ ಬ್ಯಾಂಕ್‌ ಓಪನ್‌ ಟೆನಿಸ್‌ ಟೂರ್ನಿಯ ವನಿತಾ ಸಿಂಗಲ್ಸ್‌ ಸೆಮಿಫೈನಲ್ಸ್‌ನಲ್ಲಿ ಕಜಕಿಸ್ಥಾನದ ಎಲೆನಾ ರಿಬಾಕಿನಾ ಅಮೋಘ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಗುರುವಾರ ಮುಂಜಾನೆ ನಡೆದ ರೋಮಾಂಚಕ ಹಣಾಹಣಿಯಲ್ಲಿ ದ್ವಿತೀಯ ಶ್ರೇಯಾಂಕದ ರಿಬಾಕಿನಾ 5-7, 6-2, 6-2 ಸೆಟ್‌ಗಳಿಂದ ಅಮೆರಿಕದ ಕೋಕೊ ಗಾಫ್‌ ಅವರಿಗೆ ಆಘಾತ ನೀಡಿದರು.

ಮಳೆಯಿಂದಾಗಿ ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೊದಲ ಸೆಟ್‌ ಸೋತರೂ ಛಲ ಬಿಡದ ರಿಬಾಕಿನಾ, ಭರ್ಜರಿ ಕಂಬ್ಯಾಕ್‌ ಮಾಡಿ ಜಯಭೇರಿ ಬಾರಿಸಿದರು. ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಹಾಗೂ ಸ್ಟಟ್‌ಗಾರ್ಟ್ ಪ್ರಶಸ್ತಿ ಜಯಿಸಿರುವ ರಿಬಾಕಿನಾ ವೃತ್ತಿಜೀವನದ 13ನೇ ಪ್ರಶಸ್ತಿಯತ್ತ ಕಣ್ಣಿಟ್ಟಿದ್ದಾರೆ.

ಪ್ರಶಸ್ತಿಗಾಗಿ ಸ್ವಿಯಾಟೆಕ್‌ ವರ್ಸಸ್ ರಿಬಾಕಿನಾ

ಗುರುವಾರ ರಾತ್ರಿ ನಡೆಯಲಿರುವ ಹೈವೋಲ್ಟೇಜ್ ಫೈನಲ್‌ ಪಂದ್ಯದಲ್ಲಿ ರೈಬಾಕಿನಾ ಅವರು ಪೋಲೆಂಡ್‌ನ ಬಲಿಷ್ಠ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಸವಾಲನ್ನು ಎದುರಿಸಲಿದ್ದಾರೆ. 7ನೇ ಶ್ರೇಯಾಂಕದ ಸ್ವಿಯಾಟೆಕ್‌ ಮತ್ತೊಂದು ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 1-6, 6-3 ಕಠಿನ ಹೋರಾಟದ ಜಯ ದಾಖಲಿಸಿ ಫೈನಲ್‌ ತಲುಪಿದ್ದಾರೆ. ಈಗಾಗಲೇ ವೃತ್ತಿಜೀವನದಲ್ಲಿ 25 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸ್ವಿಯಾಟೆಕ್‌ ಮತ್ತು ರಿಬಾಕಿನಾ ನಡುವಿನ ಈ ಪ್ರಶಸ್ತಿ ಸಮರ ಭಾರೀ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani