Dailyhunt Logo
  • Light mode
    Follow system
    Dark mode
    • Play Story
    • App Story
ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ

ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ

ನ್ಯೂಯಾರ್ಕ್ : ಬಾಲಿವುಡ್ ತಾರೆ ನಟಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ಆರಂಭಿಸಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ಲಾಂಚ್ ಕಾರ್ಯಕ್ರಮ ನೆರವೇರಿಸಿದ್ದು, ರೆಸ್ಟೋರೆಂಟ್ ಗೆ ಸೋನಾ ಎಂದು ಹೆಸರಿಡಲಾಗಿದೆ.

ತಮ್ಮ ರೆಸ್ಟೋರೆಂಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ, ನಮ್ಮ ಹೊಸ ರೆಸ್ಟೋರೆಂಟ್ ಸೋನಾವನ್ನು ನಿಮ್ಮ ಮುಂದಿಡಲು ನಾನಗೆ ಖುಷಿಯಾಗುತ್ತಿದೆ. ಇಲ್ಲಿ ಭಾರತೀಯ ಆಹಾರಗಳು ಸಿಗುತ್ತವೆ.

ಹರಿನಾಯಕ್ ಅಡುಗೆ ಮಾಡಲಿದ್ದು, ಅತ್ಯಂತ ರುಚಿಕರವಾದ ಮತ್ತು ಹೊಸತನವಿರುವ ಮೆನುವನ್ನು ರಚಿಸಿದ್ದಾರೆ. ನನ್ನ ದೇಶದ ಫುಡ್ ಜರ್ನಿಗೆ ನಿಮ್ಮನ್ನು ಕರೆದೊಯ್ಯುತ್ತಾರೆ ಎಂದು ಬರೆದಿದ್ದಾರೆ.

ಇನ್ನು ಇದೇ ಮಾರ್ಚ್ ತಿಂಗಳ ಕೊನೆಯಲ್ಲಿ ರೆಸ್ಟೋರೆಂಟ್ ಸೋನಾ ತೆರೆಯುತ್ತಿದೆ ಎಂದು ಸೋನಾ ರೆಸ್ಟೋರೆಂಟ್ ಉದ್ಘಾಟನೆ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೋಡಿಯಾದಲ್ಲಿ ಶೇರ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani