Dailyhunt Logo
  • Light mode
    Follow system
    Dark mode
    • Play Story
    • App Story
Pak: ಅಫ್ಘಾನ್‌ ಗಡಿಭಾಗದಲ್ಲಿ ಪಾಕ್‌ ಸೇನಾ ಕಾರ್ಯಾಚರಣೆ- 29 ಭಯೋತ್ಪಾದಕರ ಹತ್ಯೆ!

Pak: ಅಫ್ಘಾನ್‌ ಗಡಿಭಾಗದಲ್ಲಿ ಪಾಕ್‌ ಸೇನಾ ಕಾರ್ಯಾಚರಣೆ- 29 ಭಯೋತ್ಪಾದಕರ ಹತ್ಯೆ!

ಸ್ಲಾಮಾಬಾದ್: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆ ನಡೆಸಿದ ಭೂ ಸೇನಾ ಕಾರ್ಯಾಚರಣೆಯಲ್ಲಿ, ಉಗ್ರರ ಅಡಗುತಾಣಗಳು ಮತ್ತು ಸುರಕ್ಷಿತ ತಾಣಗಳ ಮೇಲೆ " ದಾಳಿ" ನಡೆಸಿ 29 ಉಗ್ರರನ್ನು ಕೊಂದಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ದೇಶಾದ್ಯಂತ ನಡೆದ ಹಲವಾರು ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಭಾನುವಾರ (ಜೂ.28) ಪ್ರತೀಕಾರದ ದಾಳಿ ನಡೆಸಿರುವುದಾಗಿ ಸಚಿವ ಅತ್ತೌಲ್ಲಾ ತರಾರ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಅಫ್ಘಾನಿಸ್ತಾನ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸುತ್ತಿರುವ ಘಟನೆ ನಡೆಯುತ್ತಿದೆ. ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಮತ್ತು ಅದರ ಸಹ ಉಗ್ರಗಾಮಿ ಸಂಘಟನೆಗಳು ಈ ದಾಳಿಯ ರೂವಾರಿಯಾಗಿರುವುದಾಗಿ ವರದಿ ತಿಳಿಸಿದೆ.

ಏತನ್ಮಧ್ಯೆ, ಕರಾಚಿಯಲ್ಲಿನ ಭಯೋತ್ಪದಕ ದಾಳಿಗೆ ಭಾರತ ಕಾರಣ ಎಂದು ಪಾಕಿಸ್ತಾನ ಆರೋಪಿಸಿದ್ದು, ಇಸ್ಲಾಮಾಬಾದ್‌ನ ಆರೋಪವನ್ನು ಭಾರತ ಆಧಾರರಹಿತ ಹೇಳಿಕೆ ಎಂದು ತಿರುಗೇಟು ನೀಡಿದೆ.

2021ರಲ್ಲಿ ಅಫ್ಘಾನಿಸ್ತಾನದಲ್ಲಿ ಅಫ್ಘಾನ್ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ನಿರಂತರ ಉದ್ವಿಗ್ನತೆಗೆ ಈ ಬೆಳವಣಿಗೆ ಸಾಕ್ಷಿಯಾಗಿರುವುದಾಗಿ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani