Dailyhunt Logo
  • Light mode
    Follow system
    Dark mode
    • Play Story
    • App Story
ಪತ್ನಿ, ತಾಯಿ, ಧನ್ವೀರ್‌ ಭೇಟಿ: ಟೆನ್ಷನ್‌ನಲ್ಲಿದ್ದ ʼದಾಸʼನಿಗೆ ಧೈರ್ಯ ತುಂಬಿದ ಆಪ್ತರು

ಪತ್ನಿ, ತಾಯಿ, ಧನ್ವೀರ್‌ ಭೇಟಿ: ಟೆನ್ಷನ್‌ನಲ್ಲಿದ್ದ ʼದಾಸʼನಿಗೆ ಧೈರ್ಯ ತುಂಬಿದ ಆಪ್ತರು

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ಜೈಲಿನಲ್ಲಿರುವ ದರ್ಶನ್‌ (Darshan) ಅವರನ್ನು ಭೇಟಿಯಾಗಲು ಒಟ್ಟಿಗೆ ಅವರ ಕುಟುಂಬಸ್ಥರು ಹಾಗೂ ಆಪ್ತರು ಬಂದಿದ್ದಾರೆ.

ಮಂಗಳವಾರ (ಆ.18) ದರ್ಶನ್‌ ಪತ್ನಿ, ವಿಜಯಲಕ್ಷ್ಮಿ, ಮೀನಾ ಹಾಗೂ ನಟ ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಮಾಡಲು ಆಗಮಿಸಿದ್ದರು.

ದರ್ಶನ್‌ ಆರೋಗ್ಯ ಹಾಗೂ ಜೈಲಿನ ಸ್ಥಿತಿಗತಿ ವಿಚಾರಿಸಲು ಪತ್ನಿ, ವಿಜಯಲಕ್ಷ್ಮಿ, ಮೀನಾ ಆಗಮಿಸಿದರು. ಇವರಿಗೆ ಸಾಥ್‌ ಧನ್ವೀರ್‌ ಅವರು ಸಾಥ್‌ ನೀಡಿದರು.

ದರ್ಶನ್‌ ಅವರಿಗೆ ಕಾನೂನು ಪ್ರಕ್ರಿಯೆಯಲ್ಲಿ ಸತತ ಹಿನ್ನೆಡೆ ಆಗುತ್ತಿದೆ. ಇತ್ತೀಚೆಗೆ ಸೊಳ್ಳೆ ಕಾಟ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದರ್ಶನ್‌ ಜೈಲಿನ ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದರು. ಇನ್ನೊಂದು ಪ್ರದೋಷ್‌ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಕೆ ಮಾಡಿರುವುದು ಕೂಡ ದರ್ಶನ್‌ಗೆ ತಲೆನೋವಿನ ವಿಚಾರವಾಗಿ ಕಾಡುತ್ತಿದೆ.

ಇದರ ನಡುವೆಯೇ ಕುಟುಂಬಸ್ಥರು ʼದಾಸʼನನ್ನು ಭೇಟಿಯಾಗಿ ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ.

ನನ್ನ ವಿಜಯಲಕ್ಷ್ಮಿ ನಡುವೆ ಮನಸ್ತಾಪವಿಲ್ಲ..

ಇನ್ನು ಜೈಲು ಭೇಟಿ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಧನ್ವೀರ್‌, ವಿಜಯಲಕ್ಷ್ಮಿ ಅವರ ಜತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ʼʼಆ ತರ ಏನು ಇಲ್ಲ, ಆ ತರ ಹೇಳಿದವರನ್ನು ಎದುರಿಗೆ ಕರ್ಕೊಂಡು ಬನ್ನಿ ಮಾತನಾಡೋಣ. ಮನಸ್ತಾಪ ಇದ್ದಿದ್ರೆ ನಾನ್ಯಾಕೆ ಭೇಟಿ ಮಾಡಲು ಬರುತ್ತಿದ್ದೆ ಎಂದಿದ್ದಾರೆ. ದರ್ಶನ್‌ ಅವರು ಆರಾಮವಾಗಿದ್ದಾರೆ ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani