ಸುರತ್ಕಲ್: ಪಣಂಬೂರಿನಲ್ಲಿರುವ ಖಾಸಗಿ ಪೆಟ್ರೋಲ್ ಬಂಕ್ ಮಾಲಕರ ಪುತ್ರನಿಗೆ ಭೂಗತ ಪಾತಕಿ 'ಕಲಿ ಯೋಗಿ' ಹಣಕ್ಕಾಗಿ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಸಮೀಪದ ಪೆಟ್ರೋಲ್ ಬಂಕ್ ನಡೆಸುತ್ತಿರುವ ಉದ್ಯಮಿಯ ಪುತ್ರನ ಮೊಬೈಲ್‌ಗೆ ಕಳೆದ ಕೆಲವು ದಿನಗಳಿಂದ ಕರೆಗಳು ಬರುತ್ತಿದ್ದವು.
ಕರೆ ಮಾಡಿದ ವ್ಯಕ್ತಿ ತಾನು ಭೂಗತ ಪಾತಕಿ ಕಲಿ ಯೋಗಿ ಎಂದು ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದಿಂದಲೇ ವಸೂಲಿ ಬೆದರಿಕೆ
ತನಿಖೆ ವೇಳೆ ಆರೋಪಿ ಕಲಿ ಯೋಗಿ ವಿದೇಶದಲ್ಲಿ ಕುಳಿತು ಈ ವಸೂಲಿ ಬೆದರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆತನ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

