ವಿಕ್ಟೋರಿಯಾ: ಸೀಷೆಲ್ಸ್‌ನ 50ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು. ಈ ಮೂಲಕ, ಸೀಷೆಲ್ಸ್‌ನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದೇ ವೇಳೆ, ಪರೇಡ್‌ನಲ್ಲಿ ಭಾರತೀಯ ಸೇನಾ ತುಕುಡಿ ಭಾಗವಹಿಸಿತ್ತು.
ಜತೆಗೆ, ಭಾರತದ 2 ಯುದ್ಧನೌಕೆಗಳು ವಿಕ್ಟೋರಿಯಾ ಬಂದರಿನಲ್ಲಿ ಬೀಡುಬಿಟ್ಟಿದ್ದವು.
ಇದಕ್ಕೂ ಮೊದಲು ಮೋದಿ ಅವರು ವಿಕ್ಟೋರಿಯಾದ ಪೀಸ್ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮೋದಿ ನಮನ ಸಲ್ಲಿಸಿದರು. ಇದಕ್ಕೂ ಮುನ್ನಅರುಳ್ ಮಿಹು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿ ಮೋದಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ, ಸ್ಥಳದಲ್ಲಿ ನೆರೆದಿದ್ದ ಮಕ್ಕಳು ಮತ್ತು ಅನಿವಾಸಿ ಭಾರತೀಯರೊಂದಿಗೆ ಮೋದಿ ಸಂವಾದ ನಡೆಸಿದರು.
ಸೀಷೆಲ್ಸ್‌ನ 3 ದಿನಗಳ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ಮೋದಿ ಅವರು, ನನ್ನ ಸೀಶೆಲ್ಸ್ ಭೇಟಿಯು ಭಾರತ-ಸೀಶೆಲ್ಸ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಫಲಿತಾಂಶಗಳನ್ನು ಒಳಗೊಂಡಿದೆ' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

