Dailyhunt
ಪ್ರಧಾನಿಯವರು ಅನಗತ್ಯವಾಗಿ ಟಿವಿಯಲ್ಲಿ ಕಾಣಿಸಿಕೊಂಡು ದಾರಿ ತಪ್ಪಿಸುತ್ತಿದ್ದಾರೆ:ಸಿದ್ದರಾಮಯ್ಯ

ಪ್ರಧಾನಿಯವರು ಅನಗತ್ಯವಾಗಿ ಟಿವಿಯಲ್ಲಿ ಕಾಣಿಸಿಕೊಂಡು ದಾರಿ ತಪ್ಪಿಸುತ್ತಿದ್ದಾರೆ:ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನಗತ್ಯವಾಗಿ ಟಿವಿಯಲ್ಲಿ ಕಾಣಿಸಿಕೊಂಡು ದೇಶದ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೇ 1ರಿಂ ಯುವಕರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿಯವರು ಹೇಳಿದ್ದರು. ಆದರೆ ರಾಜ್ಯಗಳಲ್ಲಿ ಲಸಿಕೆಯೇ ಇಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಜವಾಬ್ದಾರಾಗಬೇಕು ಮತ್ತು ಕ್ಷಮೆ ಕೇಳುಬೇಕು ಎಂದು ಹೇಳಿದ್ದಾರೆ.

ರೋಡಿಗಿಳಿದ 3ನೇ ತಲೆಮಾರಿನ ಹಯಬುಸಾ ಬೈಕ್ : ಇದರ ಬೆಲೆ, ಫೀಚರ್ ಬಗ್ಗೆ ಇಲ್ಲಿದೆ ಮಹಿತಿ

ನರೇಂದ್ರ ಮೋದಿಯವರು ಟಿವಿ ಮುಂದೆ ಬಂದು ಯುವಜನತೆಗೆ ಕ್ಷಮೆ ಕೇಳಬೇಕು ಮತ್ತು ಕೋವಿಡ್ ಲಸಿಕೆ ಪಡೆಯಲು ಇನ್ನಷ್ಟು ದಿನ ಕಾಯುವಂತೆ ಕೇಳಿಕೊಳ್ಳಬೇಕು.

ಅದು ಬಿಟ್ಟು ರಾಜ್ಯಗಳೇ ಎಲ್ಲಾ ಜವಾಬ್ದಾರಿ ಹೊರುವಂತೆ ಮಾಡಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani